ಇಲ್ಲಿದೆ ಬಿಳಿ ಕೂದಲ ಸಮಸ್ಯೆಗೆ ಪರಿಹಾರ

ವಯಸ್ಸಾಯ್ತು ಕೂದಲು ಹಣ್ಣಾಯ್ತು ಎನ್ನುವ ಕಾಲವೊಂದಿತ್ತು. ಆದ್ರೆ ಈಗ ಚಿಕ್ಕ ವಯಸ್ಸಿನವರ ಕೂದಲೂ ಬೆಳ್ಳಗಾಗ್ತಿದೆ. ಬಿಳಿ ಕೂದಲು ಅನೇಕರಿಗೆ ಸಮಸ್ಯೆಯಾಗಿದೆ. ಸೌಂದರ್ಯಕ್ಕೊಂದು ಕಪ್ಪು ಚುಕ್ಕೆಯಾಗಿದೆ. ಕಪ್ಪು ಕೂದಲು ಪಡೆಯುವ ಆಸೆ ಹೊಂದಿರುವವರಿಗೆ ಇಲ್ಲಿದೆ ಸುಲಭ ಉಪಾಯ.

ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಕಪ್ಪಾದ ಹೊಳೆಯುವ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.

ನೆಲ್ಲಿಕಾಯಿ : ಅರೆಕಾಲಿಕ ಬಿಳಿ ಕೂದಲು ಸಮಸ್ಯೆಗೆ ನೆಲ್ಲಿಕಾಯಿ ಉತ್ತಮ ಔಷಧಿ. ತೆಂಗಿನ ಎಣ್ಣೆಗೆ ಮೂರು ನಾಲ್ಕು ನೆಲ್ಲಿಕಾಯಿ ತುಂಡನ್ನು ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ನಂತರ ಎಣ್ಣೆಯನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಹಚ್ಚಿದ ಒಂದು ಗಂಟೆಯವರೆಗೆ ಕೂದಲನ್ನು ತೊಳೆಯಬೇಡಿ. ರಾತ್ರಿ ಪೂರ್ತಿ ಹಾಗೆ ಇದ್ದರೆ ಒಳ್ಳೆಯದು. ವಾರದಲ್ಲಿ ಒಂದು ಅಥವಾ ಎರಡು ಬಾರಿ ಹೀಗೆ ಮಾಡುತ್ತ ಬಂದರೆ ಬಿಳಿ ಕೂದಲು ಕಪ್ಪಗಾಗುತ್ತದೆ.

ತೆಂಗಿನೆಣ್ಣೆ-ನಿಂಬೆ ರಸ : ತೆಂಗಿನ ಎಣ್ಣೆ ಹಾಗೂ ನಿಂಬೆ ರಸ ಕೂಡ ಕೂದಲಿಗೆ ಒಳ್ಳೆಯದು. ತೆಂಗಿನ ಎಣ್ಣೆಗೆ ನಿಂಬೆ ರಸ ಬೆರೆಸಿ ಕೂದಲು ಹಾಗೂ ತಲೆಗೆ ಹಚ್ಚಿಕೊಳ್ಳಿ. ಮಸಾಜ್ ಮಾಡಿ ಒಂದು ಗಂಟೆ ನಂತರ ತಲೆ ಸ್ನಾನ ಮಾಡಿ. ತೆಂಗಿನ ಎಣ್ಣೆ ಕಪ್ಪು ಕೂದಲ ಬೆಳವಣಿಗೆಗೆ ಸಹಕಾರಿ.

ಈರುಳ್ಳಿ ರಸ: ಈರುಳ್ಳಿ ರಸ ಅರೆಕಾಲಿಕ ಕೂದಲು ಹಣ್ಣಾಗುವುದನ್ನು ತಪ್ಪಿಸುತ್ತದೆ. ತಲೆ ಬೋಳಾಗುವುದರಿಂದಲೂ ಮುಕ್ತಿ ನೀಡುತ್ತದೆ. ಒಂದು ಗಾಜಿನ ಪಾತ್ರೆಯಲ್ಲಿ ಈರುಳ್ಳಿ ರಸ ಹಾಗೂ ನಿಂಬೆ ರಸವನ್ನು ಬೆರೆಸಿ. ಅದನ್ನು ತಲೆ ಹಾಗೂ ಕೂದಲಿಗೆ ಚೆನ್ನಾಗಿ ಹಚ್ಚಿ. ಅರ್ಧ ಗಂಟೆ ನಂತರ ತೊಳೆಯಿರಿ.

ಬಾದಾಮಿ ಎಣ್ಣೆ : ಬಾದಾಮಿ ಎಣ್ಣೆ, ನಿಂಬೆ ರಸ, ನೆಲ್ಲಿ ಕಾಯಿ ರಸವನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ. ನಂತರ ಅದನ್ನು ತಲೆಗೆ ಹಚ್ಚಿಕೊಳ್ಳಿ. ಕ್ರಮೇಣ ಕೂದಲು ಕಪ್ಪಗಾಗುತ್ತದೆ.

ಗೋರಂಟಿ ಎಲೆ : ಕೂದಲನ್ನು ಕಪ್ಪಾಗಿಸಲು ಗೋರಂಟಿ ಎಲೆಗಳನ್ನು ಬಳಸಬಹುದು. ಗೋರಂಟಿ ಎಲೆಗಳನ್ನು ರುಬ್ಬಿ, ಅದಕ್ಕೆ ಮೂರು ಚಮಚ ನೆಲ್ಲಿಕಾಯಿ ಪುಡಿ, ಒಂದು ಚಮಚ ಕಾಫಿ ಪುಡಿ, ಒಂದು ಚಮಚ ಮೊಸರು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಿ.

ಕರಿಬೇವಿನ ಎಲೆ : ತೆಂಗಿನ ಎಣ್ಣೆಗೆ ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ. ನಂತರ ತಣ್ಣಗಾದ ಮೇಲೆ ಅದನ್ನು ಕೂದಲಿಗೆ ಮಸಾಜ್ ಮಾಡಿ. 30-45 ನಿಮಿಷ ಬಿಟ್ಟು ತೊಳೆಯಿರಿ.

ಕಪ್ಪು ಎಳ್ಳು : ಎಳ್ಳೆಣ್ಣೆ ಕೂಡ ಅರೆಕಾಲಿಕ ಬಿಳಿ ಕೂದಲು ತಪ್ಪಿಸಲು ಸಹಕಾರಿ. ಪ್ರತಿದಿನ ಕರಿ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತ ಬಂದರೆ ಮೂರು ತಿಂಗಳಲ್ಲಿ ಪರಿಣಾಮ ನೋಡಬಹುದಾಗಿದೆ.

ಸೋರೆಕಾಯಿ ರಸ : ಸೋರೆಕಾಯಿ ರಸ ಕೂಡ ಕೂದಲಿಗೆ ಒಳ್ಳೆಯದು. ಕೂದಲು ಹಣ್ಣಾಗುವುದನ್ನು ಇದು ತಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read