ಗರ್ಭಿಣಿಯರನ್ನು ಕಾಡುವ ತುರಿಕೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ತುರಿಕೆ ಗರ್ಭಿಣಿಯಾದ ಸಂದರ್ಭದಲ್ಲಿ ಕಾಡುವ ಸಾಮಾನ್ಯ ಸಮಸ್ಯೆ.

ಎರಡನೇ ತ್ರೈಮಾಸಿಕದಿಂದ ಬಹುತೇಕ ಎಲ್ಲಾ ಗರ್ಭಿಣಿಯರೂ ಈ ಸಮಸ್ಯೆಯನ್ನ ಎದುರಿಸುತ್ತಾರೆ. ಈ ಸಮಯದಲ್ಲಿ ಹೊಟ್ಟೆಯ ಗಾತ್ರ ಹಿಗ್ಗೋದ್ರಿಂದ ತೇವಾಂಶ ಕಡಿಮೆಯಾಗುತ್ತೆ. ಹಾಗೂ ಶ್ರೋಣಿಯ ಭಾಗ ಕೂಡ ಹಿಗ್ಗೋದ್ರಿಂದ ಈ ತುರಿಕೆ ಸಮಸ್ಯೆ ಉಂಟಾಗುತ್ತದೆ.

ಹಾರ್ಮೋನ್​ ಬದಲಾವಣೆಯೇ ತುರಿಕೆಗೆ ಮೂಲ ಕಾರಣ. ಆದರೆ ನೀವು ಈ ಅಂಶಗಳನ್ನ ಗಮನದಲ್ಲಿ ಇಟ್ಟುಕೊಳ್ಳೋದ್ರಿಂದ ತುರಿಕೆ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವಿದ್ದರೆ ಬಿಟ್ಟುಬಿಡಿ. ಅತಿಯಾದ ಬಿಸಿ ನೀರು ಚರ್ಮವನ್ನ ಇನ್ನಷ್ಟು ಶುಷ್ಕ ಮಾಡುತ್ತದೆ. ಇದರಿಂದ ಮತ್ತೆ ನಿಮಗೆ ತುರಿಕೆ ಹೆಚ್ಚಾಗುತ್ತದೆ.

ಸಿಕ್ಕಾಪಟ್ಟೆ ಸುವಾಸನೆಯುಳ್ಳ ಹಾಗೂ ರಾಸಾಯನಿಕಗಳನ್ನೊಳಗೊಂಡ ಸಾಬೂನುಗಳನ್ನ ಬಳಸಲೇಬೇಡಿ. ಅದರ ಬದಲು ಕಡ್ಲೆಹಿಟ್ಟಿನಲ್ಲಿ ಸ್ನಾನ ಮಾಡಿ. ಹಾಗೂ ಕೊಬ್ಬರಿ ಎಣ್ಣೆಯಿಂದ ಮಸಾಜ್​ ಮಾಡಿಕೊಳ್ಳಿ.

ಬಿಸಿಲಿನಲ್ಲಿ ಚೆನ್ನಾಗಿ ಒಣಗಿದ ಸ್ವಚ್ಛ ಬಟ್ಟೆಗಳನ್ನೇ ಧರಿಸಿ. ಹತ್ತಿಯ ಬಟ್ಟೆಗಳು ನಿಮಗೆ ಈ ಸಮಯದಲ್ಲಿ ಹೆಚ್ಚು ಆರಾಮದಾಯಕ ಎನಿಸಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read