ನಿಮ್ಮ ʼಇಷ್ಟಾರ್ಥ ಸಿದ್ಧಿʼಗೆ ಇಲ್ಲಿದೆ ಮಾರ್ಗ

ಜೀವನದಲ್ಲಿ ಕಷ್ಟ, ಸುಖಗಳು ಸಹಜ. ಕೆಲವೊಮ್ಮೆ ಕಷ್ಟ ಎದುರಾದರೆ, ಮತ್ತೊಮ್ಮೆ ಸುಖ, ಸಂತೋಷ, ನೆಮ್ಮದಿ ಇರುತ್ತದೆ.

ಕಷ್ಟಗಳು ಬಂದಾಗ ಕುಗ್ಗದೇ, ಸುಖದಲ್ಲಿರುವಾಗ ಹಿಗ್ಗದೇ ಸಮನಾಗಿ ಇರಬೇಕೆಂದು ತಿಳಿದವರು ಹೇಳುತ್ತಾರೆ. ಆದರೆ, ಅನೇಕರಿಗೆ ಜೀವನದಲ್ಲಿ ಸದಾ ಕಷ್ಟದಲ್ಲಿರುವಂತೆಯೇ ಕಾಣಿಸುತ್ತದೆ.

ಸುಖ- ಸಂತೋಷ ಎಂದರೆ, ಕೇವಲ ಹಣವೊಂದರಿಂದಲೇ ಬರುವಂತದ್ದಲ್ಲ. ನಮ್ಮ ಸುತ್ತಲಿನ ಸಂಗತಿ, ಕುಟುಂಬ, ಸ್ನೇಹಿತರ ವಲಯ, ಕೆಲಸದ ಸ್ಥಳಗಳು ಕೂಡ ಪರಿಣಾಮ ಬೀರುತ್ತವೆ. ಎಲ್ಲಾ ಇದ್ದರೂ, ನೆಮ್ಮದಿ ಇಲ್ಲ ಎಂದು ಹೆಚ್ಚಿನವರು ಹೇಳುತ್ತಾರೆ. ಏನೂ ಕೆಲಸ ಮಾಡಿದರೂ ಕೈಗೂಡುತ್ತಿಲ್ಲ ಎಂದು ಕೊರಗುತ್ತಾರೆ.

ಅದರಿಂದ ಹೊರ ಬಂದು ದೇವರನ್ನು ಪ್ರಾರ್ಥಿಸಿದಲ್ಲಿ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರಾರ್ಥನೆ ಫಲ ಕೊಡುತ್ತದೆ ಎಂದು ಅನೇಕರು ಹೇಳುತ್ತಾರೆ. ಅದು ಸಾಧ್ಯವಾಗಿದೆ ಕೂಡ.

ಸರ್ವಶಕ್ತನಾದ ಭಗವಂತನನ್ನು ಪ್ರಾರ್ಥಿಸಿದಲ್ಲಿ ಕಷ್ಟಗಳು ದೂರವಾಗುತ್ತವೆ ಎಂಬ ಭಾವನೆ ಹಿಂದಿನಿಂದಲೂ ಇದೆ. ಅನೇಕರು ಪ್ರಾರ್ಥನೆಯಿಂದಲೇ ಫಲವನ್ನು ಪಡೆದಿದ್ದಾರೆ. ಸಾಧನೆ ಮಾಡಿದ್ದಾರೆ. ನಂಬಿಕೆಯಿಂದ ಪ್ರಾರ್ಥನೆ ಮಾಡಿದಲ್ಲಿ, ಸಂಕಷ್ಟಗಳು ಪರಿಹಾರವಾಗುತ್ತವೆ ನೀವೂ ಪ್ರಯತ್ನಿಸಿ. ತಕ್ಷಣದ ಫಲವನ್ನು ಅಪೇಕ್ಷಿಸದೇ ಪ್ರಯತ್ನದೊಂದಿಗೆ ಮುನ್ನಡೆದಲ್ಲಿ ಸಂಕಷ್ಟಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ ತಿಳಿದವರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read