ಇಲ್ಲಿದೆ ಆರೋಗ್ಯಕ್ಕೆ ಹಿತಕರ ‘ನುಗ್ಗೆಕಾಯಿʼ ಸೂಪ್ ಮಾಡುವ ವಿಧಾನ

ಈಗಂತೂ ಮಳೆಗಾಲ, ಏನಾದರೂ ಬಿಸಿಬಿಸಿಯಾಗಿರುವುದು ಮಾಡಿಕೊಂಡು ಕುಡಿಯೋಣ ಅನಿಸುತ್ತದೆ. ರುಚಿಯ ಜತೆಗೆ ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ಇಲ್ಲಿದೆ. ಆರೋಗ್ಯಕ್ಕೂ ತುಂಬಾ ಒಳ್ಳೆಯದು ಇದು.

ಬೇಕಾಗುವ ಸಾಮಾಗ್ರಿಗಳು:

2 ಕಪ್ – ನುಗ್ಗೆಕಾಯಿ ಪೀಸ್, 1 ಟೀ ಸ್ಪೂನ್ – ಬೆಣ್ಣೆ, ½ ಕಪ್ – ಕತ್ತರಿಸಿದ ಈರುಳ್ಳಿ, ½ ಕಪ್ – ಕತ್ತರಿಸಿದ ಆಲೂಗಡ್ಡೆ, ½ ಕಪ್ – ಹಾಲು, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಒಂದು ಕುಕ್ಕರ್ ಗೆ ಬೆಣ್ಣೆ ಹಾಕಿಕೊಂಡು ಅದಕ್ಕೆ ಈರುಳ್ಳಿ, ಆಲೂಗಡ್ಡೆ, ನುಗ್ಗೆಕಾಯಿ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಕಪ್ ನೀರು ಹಾಕಿ 3 ವಿಷಲ್ ಕೂಗಿಸಿಕೊಳ್ಳಿ.

ಕುಕ್ಕರ್ ತಣ್ಣಗಾದ ಮೇಲೆ ಈ ಮಿಶ್ರಣವನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ ಹಾಲು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.

ನಂತರ ಇದನ್ನು ಸೋಸಿಕೊಂಡು ಒಂದು ನಾನ್ ಸ್ಟಿಕ್ ಪ್ಯಾನ್ ಗೆ ಹಾಕಿಕೊಂಡು ಉಪ್ಪು, ಕಾಳು ಮೆಣಸಿನಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 3 ನಿಮಿಷಗಳ ಕಾಲ ಕುದಿಸಿಕೊಂಡರೆ ರುಚಿಕರವಾದ ನುಗ್ಗೆಕಾಯಿ ಸೂಪ್ ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read