ಇಲ್ಲಿದೆ ಪ್ರತಿ ತಿಂಗಳು ಭರ್ಜರಿ ಮಾರಾಟವಾಗುವ ಟಾಪ್‌ 5 ಕಾರುಗಳ ಪಟ್ಟಿ: ಬೆಲೆ ಕಡಿಮೆ, ಮೈಲೇಜ್ ಕೂಡ ಅತ್ಯಧಿಕ….!

ಮಿತವ್ಯಯದ, ಉತ್ತಮ ಮೈಲೇಜ್ ನೀಡುವ ಮತ್ತು  ಆರಾಮದಾಯಕವಾದ ಕಾರನ್ನು ಎಲ್ಲರೂ ಬಯಸುತ್ತಾರೆ. ಇಂತಹ 5 ಕಾರುಗಳು ಪ್ರತಿ ತಿಂಗಳು ಭರ್ಜರಿ ಮಾರಾಟವಾಗುತ್ತಿವೆ. ಈ ಕಾರುಗಳ ಬೆಲೆಯೂ ಕಡಿಮೆಯಿದ್ದು, ಮೈಲೇಜ್ ಅತ್ಯಧಿಕವಾಗಿದೆ.

ಮಾರುತಿ ಸುಜುಕಿ ಆಲ್ಟೊ

ಮಾರುತಿ ಸುಜುಕಿ ಆಲ್ಟೊ, ಕೈಗೆಟುಕುವ ಬೆಲೆ ಮತ್ತು ಅತ್ಯುತ್ತಮ ಮೈಲೇಜ್‌ಗಾಗಿ ಹೆಸರುವಾಸಿಯಾಗಿದೆ. ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದೂ ಒಂದು. ಈ ಕಾರು ನಗರದಲ್ಲಿ ಓಡಿಸಲು ತುಂಬಾ ಆರಾಮದಾಯಕವಾಗಿದೆ.

ಹುಂಡೈ i10

ಹ್ಯುಂಡೈ i10 ಕಾರು ಸೊಗಸಾದ ವಿನ್ಯಾಸ ಮತ್ತು ಆರಾಮದಾಯಕ ಸವಾರಿಯಿಂದಾಗಿ ಜನಪ್ರಿಯತೆ ಗಳಿಸಿದೆ. ಈ ಕಾರು ತುಂಬಾ ಮಿತವ್ಯಯಕಾರಿ ಮತ್ತು ಉತ್ತಮ ಮೈಲೇಜ್ ನೀಡುತ್ತದೆ.

ಟಾಟಾ ಟಿಯಾಗೊ

ಟಾಟಾ ಟಿಯಾಗೊ ತನ್ನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಆಧುನಿಕ ವಿನ್ಯಾಸದ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಈ ಕಾರು ತುಂಬಾ ಮಿತವ್ಯಯಕಾರಿ ಮತ್ತು ಉತ್ತಮ ಮೈಲೇಜ್ ನೀಡುತ್ತದೆ.

ಮಾರುತಿ ಸುಜುಕಿ ವ್ಯಾಗನಾರ್

ಮಾರುತಿ ಸುಜುಕಿ ವ್ಯಾಗನಾರ್‌ನಲ್ಲಿ ಸ್ಥಳಾವಕಾಶ ಚೆನ್ನಾಗಿದೆ. ಮೈಲೇಜ್‌ ಕೂಡ ಅಧ್ಬುತ. ಇದೊಂದು ಅತ್ಯುತ್ತಮ ಫ್ಯಾಮಿಲಿ ಕಾರು. ಹಾಗಾಗಿ ವ್ಯಾಗನಾರ್‌ ಚೆನ್ನಾಗಿ ಮಾರಾಟವಾಗ್ತಿದೆ.

ರೆನಾಲ್ಟ್ ಕ್ವಿಡ್

ರೆನಾಲ್ಟ್ ಕ್ವಿಡ್ ತನ್ನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಆಕರ್ಷಕ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಈ ಕಾರು ಆಫ್ ರೋಡಿಂಗ್‌ಗೂ ಉತ್ತಮವಾಗಿದೆ.

ಯಾವ ಕಾರು ನಿಮಗೆ ಸೂಕ್ತ?

ಇದು ಸಂಪೂರ್ಣವಾಗಿ ನಮ್ಮ ನಮ್ಮ ಅಗತ್ಯತೆಗಳು ಮತ್ತು ಬಜೆಟ್ ಅನ್ನು ಅವಲಂಬಿಸಿರುತ್ತದೆ. ಮೇಲ್ಕಂಡ ಐದೂ ಕಾರುಗಳು ಬಜೆಟ್‌ ಫ್ರೆಂಡ್ಲಿ ಜೊತೆಗೆ ಉತ್ತಮ ಮೈಲೇಜ್‌ ಕೂಡ ನೀಡುತ್ತವೆ. ಆಸಕ್ತರು ಇವಗಳನ್ನೂ ಖರೀದಿಸಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read