ಇಲ್ಲಿದೆ ಚಾಟ್ಸ್‌ ಪ್ರಿಯರು ತಿಳಿದುಕೊಳ್ಳಲೇಬೇಕಾದ ಮಾಹಿತಿ…!

ರುಚಿಯ ಮುಂದೆ ಆರೋಗ್ಯ ಲೆಕ್ಕಕ್ಕಿಲ್ಲ ಎಂಬಂತಾಗಿದೆ ಈಗಿನ ಸ್ಥಿತಿ. ಬಹುತೇಕ ಎಲ್ಲರೂ ಆರೋಗ್ಯವನ್ನು ಲೆಕ್ಕಿಸದೇ ಟೇಸ್ಟಿ ತಿನಿಸುಗಳನ್ನು ಸವಿಯುತ್ತಾರೆ. ಪಾನಿಪುರಿ, ಗೋಲ್ಗಪ್ಪದಂತಹ ಹುಳಿ-ಖಾರಭರಿತ ಚಾಟ್‌ಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಈ ಮಸಾಲೆಯುಕ್ತ ಸ್ಟ್ರೀಟ್ ಫುಡ್‌ಗಳನ್ನು ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಆದರೆ ಇವು ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿಯಾಗಿ ಹುಳಿ ಸೇವಿಸಿದರೆ ಆರೋಗ್ಯಕ್ಕೆ ಆಗುವ ಹಾನಿ ಏನು ಅನ್ನೋದನ್ನು ತಿಳಿಯೋಣ.

ಜೀರ್ಣಕ್ರಿಯೆ ಸಮಸ್ಯೆ – ಹೆಚ್ಚು ಹುಳಿ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ತಿನಿಸುಗಳು ಆಮ್ಲೀಯತೆ, ಹೊಟ್ಟೆ ನೋವು ಮತ್ತು ವಾಕರಿಕೆಗೆ ಕಾರಣವಾಗಬಹುದು. ಇವುಗಳ ಬದಲಾಗಿ ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.

ಅಧಿಕ ರಕ್ತದೊತ್ತಡಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಆದಷ್ಟು ಹುಳಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಬಿಪಿ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಹೃದಯ ರೋಗಗಳುಭಾರತದಲ್ಲಿ ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ಅತಿ ಹೆಚ್ಚು. ಇದಕ್ಕೆ ಹುಳಿ ಪದಾರ್ಥಗಳ ಸೇವನೆಯೂ ಒಂದು ಕಾರಣವೆಂದು ಪರಿಗಣಿಸಲಾಗಿದೆ. ಆರೋಗ್ಯ ತಜ್ಞರ ಪ್ರಕಾರ ಹೆಚ್ಚು ಹುಳಿ ಅಂಶವಿರುವ ಆಹಾರ ಸೇವನೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಮೂತ್ರಪಿಂಡಗಳ ಮೇಲೆ ಒತ್ತಡಮಿತಿಗಿಂತ ಹೆಚ್ಚು ಹುಳಿ ಸೇವಿಸಿದರೆ ಕಿಡ್ನಿ ಮೇಲೆ ಒತ್ತಡ ಹೆಚ್ಚುತ್ತದೆ. ವಾಸ್ತವವಾಗಿ ಮೂತ್ರಪಿಂಡದ ಕೆಲಸವೆಂದರೆ ಫಿಲ್ಟರ್ ಮಾಡುವುದು. ಹುಳಿ ಹುಳಿ ಚಾಟ್ಸ್‌ ಸೇವಿಸಿದಾಗ ಮೂತ್ರಪಿಂಡಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು.

ಹಲ್ಲುಗಳಿಗೆ ಹಾನಿಹುಳಿ ಆಹಾರವನ್ನು ಸೇವಿಸಿದಾಗಲೆಲ್ಲಾ ಅದರ ಪರಿಣಾಮವು ಹಲ್ಲಿನ ಮೇಲೆ ಗೋಚರಿಸುತ್ತದೆ. ಇದು ಪ್ರತಿಯೊಬ್ಬರಿಗೂ ಅನುಭವವಾಗಿರುತ್ತದೆ. ಹುಳಿ ಹುಳಿಯಾದ ತಿನಿಸುಗಳು ಹಲ್ಲುಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಟೊಳ್ಳಾಗಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read