ಮಾವಿನ ಹಣ್ಣುಗಳ ಕುರಿತಾದ ತಪ್ಪು ತಿಳುವಳಿಕೆ ಬಗ್ಗೆ ಇಲ್ಲಿದೆ ಮಾಹಿತಿ

ಹಣ್ಣುಗಳ ರಾಜ ಮಾವಿನ ಹಣ್ಣನ್ನ ಇಷ್ಟವಿಲ್ಲ ಅಂತಾ ಹೇಳುವವರೇ ಸಿಗಲಿಕ್ಕಿಲ್ಲ. ವಿವಿಧ ಜಾತಿಯ ಮಾವಿನಹಣ್ಣಗಳು ವಿವಿಧ ರೀತಿಯ ರುಚಿಯನ್ನ ಹೊಂದಿರುತ್ತವೆ.

ಆದರೆ ಮಾವಿನ ಹಣ್ಣಿನ ಕುರಿತಾದ ಕೆಲ ತಪ್ಪು ತಿಳುವಳಿಕೆಯಿಂದಾಗಿ ಜನರು ಇಷ್ಟವಿದ್ದರೂ ಸಹ ಮಾವಿನ ಹಣ್ಣುಗಳನ್ನ ತಿನ್ನಲು ಹಿಂಜರಿಯುತ್ತಾರೆ. ಮಾವುಗಳ ಕುರಿತಾದ ಕೆಲ ತಪ್ಪು ತಿಳುವಳಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ :

ಅನೇಕರು ಮಾವಿನ ಹಣ್ಣಿನಿಂದ ತೂಕ ಹೆಚ್ಚಾಗುತ್ತೆ ಎಂದು ಹೇಳುತ್ತಾರೆ. ಆದರೆ ಮಾವಿನ ಹಣ್ಣಿನಲ್ಲಿ ಸೋಡಿಯಂ ಆಗಲಿ ಕೊಲೆಸ್ಟ್ರಾಲ್​ ಅಂಶವಾಗಲಿ ಇರೋದಿಲ್ಲ. ಹೀಗಾಗಿ ಇದರಿಂದ ತೂಕ ಹೆಚ್ಚಾಗೋದಿಲ್ಲ. ಹೀಗಾಗಿ ನೀವು ಯಾವುದೇ ಭಯವಿಲ್ಲದೇ ಈ ಹಣ್ಣನ್ನ ಸೇವಿಸಬಹುದು.

ಮಾವಿನ ಹಣ್ಣು ತಿಂದರೆ ಬಾಯಿಯಲ್ಲಿ ಹುಣ್ಣಾಗುತ್ತೆ ಎಂದೂ ಹೇಳುವವರಿದ್ದಾರೆ. ಆದರೆ ಮಾವಿನ ಹಣ್ಣಿನಲ್ಲಿರುವ ಆಂಟಿ ಆಕ್ಸಿಡಂಟ್​ ಅಂಶದಿಂದಾಗಿ ದೇಹದಲ್ಲಿರುವ ನಂಜಿನ ಅಂಶ ದೂರಾಗಲಿದೆ ಹೊರತು ಹುಣ್ಣು ಆಗೋದಿಲ್ಲ. ಅಲ್ಲದೇ ಮೊಡವೆ ಸಮಸ್ಯೆ ಕೂಡ ಮಾವಿನ ಹಣ್ಣು ಸೇವನೆಯಿಂದ ಬರೋದಿಲ್ಲ.

ಮಧುಮೇಹಿಗಳಿಗೆ ಅನೇಕರು ಮಾವಿನ ಹಣ್ಣನ್ನ ಸೇವಿಸೋಕೆ ಬಿಡೋದಿಲ್ಲ. ಆದರೆ ಮಾವಿನ ಹಣ್ಣಿನಲ್ಲಿ ಗ್ಲೈಸೆಮಿಕ್​ ಇಂಡೆಕ್ಸ್ 55ಕ್ಕಿಂತ ಕಡಿಮೆ ಇದೆ. ಆದ್ದರಿಂದ ಮಧುಮೇಹಿಗಳು ಈ ಹಣ್ಣನ್ನ ತಿನ್ನಬಹುದಾಗಿದೆ. ಆದರೆ ಇತಿಮಿತಿಯಲ್ಲಿದ್ದರೆ ಅನುಕೂಲ.

ಅನೇಕರು ಗರ್ಭಿಣಿಯರಿಗೆ ಪಪಾಯಾದ ಜೊತೆಯಲ್ಲಿ ಮಾವಿನ ಹಣ್ಣನ್ನೂ ಸೇವಿಸೋಕೆ ಬಿಡೋದಿಲ್ಲ. ಇದರಿಂದ ದೇಹದಲ್ಲಿ ಉಷ್ಣ ಹೆಚ್ಚಾಗಲಿದೆ ಎಂದು ಹೇಳುತ್ತಾರೆ. ಆದರೆ ಮಾವಿನ ಹಣ್ಣಿನಿಂದ ಈ ರೀತಿಯ ಸಮಸ್ಯೆ ಉಂಟಾಗೋದಿಲ್ಲ. ಆದರೆ ಅತಿಯಾದ ಮಾವಿನ ಹಣ್ಣಿನ ಸೇವನೆ ಕೂಡ ಒಳ್ಳೆಯದಲ್ಲ ಅನ್ನೋದನ್ನೂ ನೆನಪಿನಲ್ಲಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read