ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬಳ್ಳಾರಿ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ)ದಿಂದ 2023-24ನೇ ಸಾಲಿಗೆ ವಿದೇಶಿ ವ್ಯಾಸಂಗಕ್ಕಾಗಿ (OVERSEAS) ವಿದೇಶಿ ಸಾಲ ಯೋಜನೆಯಡಿ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ ಜನಾಂಗದ ವಿದ್ಯಾರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಮಾನ್ಯತೆ ಪಡೆದಿರುವ ಯಾವುದೇ ವಿದೇಶಿ ವಿಶ್ವವಿದ್ಯಾಲಯದಿಂದ, ಭಾರತ ದೇಶದ ಪ್ರತಿಷ್ಟಿತ ಐ.ಐ.ಟಿ.ಎಸ್ (IIT’S), ಐ.ಐ.ಎಂ.ಎಸ್ (IIM’S), ಐ.ಎಸ್.ಸಿ (ISC) ಸಂಸ್ಥೆಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡ ಬಯಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾಭ್ಯಾಸ (OVERSEAS EDUCATION) ಸಾಲ ಯೋಜನೆಯಡಿ ಸಾಲ ಪಡೆಯಲು http://kmdconline.karnataka.gov.in/ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿಯನ್ನು ಪ್ರಿಂಟ್ ಔಟ್ ಪಡೆದು ಕ್ಯೂಆರ್ ಕೋಡ್ ಹೊಂದಿರುವ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿ.ಯು.ಸಿ ಅಂಕಪಟ್ಟಿ, ಆಧಾರ್ ರ್ಕಾರ್ಡ್,  ಫೋಟೋ, ಎಸ್.ಎಸ್.ಎಲ್.ಸಿ ವರ್ಗಾವಣಾ ಪತ್ರ, ಪ್ರಸ್ತುತ ಅಧ್ಯಯನದ ಪ್ರಮಾಣ ಪತ್ರ, ಕಾಲೇಜು ಶುಲ್ಕ ರಚನೆ, ಪಾಸ್  ಪೋರ್ಟ್ನಕಲು, ವೀಸಾ ನಕಲು, ಫಲಾನುಭವಿಯ ಪ್ರಮಾಣ ಪತ್ರ, ಫಲಾನುಭವಿ & ಜಾಮೀನುದಾರರ ಜಂಟಿ ಪ್ರಮಾಣ ಪತ್ರ, ಪ್ರಾಮೀಸರಿ ನೋಟ್ ಜೋತೆಗೆ ಡಿ.ಪಿ. ನೋಟ್ ಡಿಲಿವರಿ ಲೇಟರ್, ಮಾರಾಟ ಪತ್ರಗಳು ಮತ್ತು ತಾಯಿಯ ಪತ್ರ, ಖಾತಾಸಾರ ಮತ್ತು ಖಾತಾ ಪ್ರಮಾಣಪತ್ರ ಅಥವಾ ರೂಪಾಂತರ, ನಮೂನೆ ನಂ.15ರಲ್ಲಿ ನಿಲ್ ಎನ್ಕಂಬರೆನ್ಸ್ ಪ್ರಮಾಣಪತ್ರ, ನವೀಕೃತ ತೆರೆಗೆ ಪಾವತಿಸಿದ ರಶೀದಿ, ಸೂಕ್ತ ಪ್ರಾಧಿಕಾರದಿಂದ ಮಾರ್ಗದರ್ಶನ ದರ, ಜಿಲ್ಲಾ ವ್ಯವಸ್ಥಾಪಕರಿಂದ ಆಸ್ತಿಯ ಸ್ಥಳ ಪರಿಶೀಲನೆ ವರದಿ ಹಾಗೂ ನೋಂದಾಯಿತ ಮೌಲ್ಯಮಾಪಕರಿಂದ ಮೌಲ್ಯಮಾಪನ ವರದಿ, ಈ ಎಲ್ಲಾ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಮ.ನಂ.47/25, ನಳಂದ ಕಾಲೇಜ್ ಪಕ್ಕದಲ್ಲಿ, ಹಳೇ ಮಾರುಕಟ್ಟೆ ರಸ್ತೆ, ವಿಜಯನಗರ ಕಾಲೋನಿ,ಕಂಟೋನ್ಮೆಂಟ್, ಬಳ್ಳಾರಿ-583104 ಇಲ್ಲಿಗೆ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂ.08392-294370 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read