ಪದೇ ಪದೇ ಕಾಡುವ ಸೀನು, ನೆಗಡಿಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು !

ಸೀನು ಮತ್ತು ನೆಗಡಿ ಸಾಮಾನ್ಯ ಸಮಸ್ಯೆಗಳಲ್ಲೊಂದು. ಬದಲಾಗುತ್ತಿರುವ ಋತುವಿನಲ್ಲಿ ಇದು ಯಾರಿಗಾದರೂ ಬರಬಹುದು. ಸಾಮಾನ್ಯವಾಗಿ ಒಂದೆರಡು ಸೀನು ಬಂದ್ರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ಒಂದೇ ಸಮನೆ ಹತ್ತಾರು ಬಾರಿ ಸೀನುವುದು ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

ನಮ್ಮ ಸುತ್ತಮುತ್ತಲಿನ ಜನರಿಗೆ ಕಿರಿಕಿರಿ ಉಂಟುಮಾಡಬಹುದು. ಈ ರೀತಿಯ ಸೀನುವಿಕೆ ಇತರರಿಗೂ ಸೋಂಕಿನ ಅಪಾಯ ತರುತ್ತದೆ. ಹಾಗಾಗಿ ಆದಷ್ಟು ಬೇಗ ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಕೆಲವೊಂದು ಸರಳ ಉಪಾಯಗಳನ್ನು ಮಾಡಬೇಕು.

ನೀರು – ಸೀನುವಿಕೆಯನ್ನು ತಡೆಗಟ್ಟಲು ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಈ ಪ್ರಕ್ರಿಯೆ ಸೀನುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ 7 ರಿಂದ 8 ಗ್ಲಾಸ್ ನೀರು ಕುಡಿಯುವುದು ಸೂಕ್ತ.

ಈ ವಸ್ತುಗಳನ್ನು ಬಳಸಿಸೀನುವಿಕೆಯನ್ನು ತೊಡೆದುಹಾಕಲು ಮನೆಮದ್ದುಗಳು ಪರಿಣಾಮಕಾರಿ. ಜೇನುತುಪ್ಪ, ತುಳಸಿ ಎಲೆಗಳು, ಶುಂಠಿ ಮತ್ತು ಬೇವಿನ ಎಲೆಗಳನ್ನು ಬಳಸಬಹುದು. ಇದು  ಶತಮಾನಗಳಿಂದ ಬಳಸಲಾಗುತ್ತಿರುವ ಆಯುರ್ವೇದ ಚಿಕಿತ್ಸಾ ವಿಧಾನ. ಇವುಗಳ ಸೇವನೆಯಿಂದ ಸೀನುವಿಕೆ ಕಡಿಮೆಯಾಗುತ್ತದೆ.

ನೈರ್ಮಲ್ಯವನ್ನು ಕಾಪಾಡಿಕೊಳ್ಳಿಸೀನುವಿಕೆಯ ನಂತರ ನಾವು ನಮ್ಮ ಕೈಗಳಿಂದ ಮೂಗನ್ನು ಒರೆಸುತ್ತೇವೆ. ಇದರಿಂದಾಗಿ ಸೋಂಕು ಇನ್ನಷ್ಟು ಹೆಚ್ಚಾಗುತ್ತದೆ. ನಮ್ಮ ಸುತ್ತಲಿನ ಜನರು ಸಹ ಅಪಾಯಕ್ಕೆ ಒಳಗಾಗಬಹುದು. ಹಾಗಾಗಿ ನಿಯಮಿತವಾಗಿ ಕೈಗಳನ್ನು ಸ್ವಚ್ಛಗೊಳಿಸುತ್ತಿರಿ. ಮಾಸ್ಕ್‌ ಧರಿಸುವ ಮೂಲಕ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read