ಸುಟ್ಟ ಗಾಯಕ್ಕೆ ಇಲ್ಲಿದೆ ಪರಿಣಾಮಕಾರಿಯಾದ ಪ್ರಥಮ ಚಿಕಿತ್ಸೆ….!

ಸುಟ್ಟ ಗಾಯಗಳಾದಾಗ ಪಕ್ಕನೆ ಪೇಸ್ಟ್ ಹಚ್ಚುವವರಲ್ಲಿ ನೀವೂ ಒಬ್ಬರೇ. ಈ ತಪ್ಪನ್ನು ನೀವು ಮಾಡಲೇಬೇಡಿ.

ಯಾಕೆನ್ನುತ್ತೀರಾ….?
ಸುಟ್ಟ ಗಾಯ ಸಣ್ಣದಾಗಿದ್ದರೆ ಕನಿಷ್ಠ ಅರ್ಧ ಗಂಟೆ ಹೊತ್ತು ಆ ಜಾಗಕ್ಕೆ ತಂಪಾದ ನೀರನ್ನು ಹರಿಯಬಿಡಿ.

ಬಳಿಕ ನೋವು ನಿವಾರಕ ಮುಲಾಮುಗಳನ್ನು ಹಚ್ಚಿದರೆ ಸಾಕು. ಅಲೋವೇರಾ ಜೆಲ್ ಅಥವಾ ಜೇನುತುಪ್ಪ ಇಂತಹ ನೋವುಗಳನ್ನು ಬಹುಬೇಗ ಗುಣಪಡಿಸಬಲ್ಲದು.

ಸುಟ್ಟ ಗಾಯದ ಮೇಲೆ ಎಣ್ಣೆ, ತುಪ್ಪ ಅಥವಾ ಬೆಣ್ಣೆ ಹಚ್ಚುವುದರಿಂದ ಗಾಯ ಉಲ್ಬಣವಾಗಬಹುದು. ಸುಟ್ಟ ಗಾಯದ ಮೇಲೆ ತೈಲಗಳು ಶಾಖವನ್ನು ಹಿಡಿದಿಡುತ್ತವೆ. ಟೂತ್ ಪೇಸ್ಟ್ ಹಚ್ಚುವುದರಿಂದಲೂ ಹಾನಿ ಹೆಚ್ಚಬಹುದು.

ಮೊಟ್ಟೆಯ ಬಿಳಿಭಾಗವನ್ನು ಸುಟ್ಟ ಗಾಯದ ಮೇಲಿಟ್ಟರೆ ಬ್ಯಾಕ್ಟೀರಿಯಾದ ಸೋಂಕು ಕಾಣಿಸಿಕೊಳ್ಳುವ ಅಪಾಯವೇ ಹೆಚ್ಚು. ಇದರಿಂದ ಅಲರ್ಜಿಯೂ ಹೆಚ್ಚಬಹುದು. ಐಸ್ ಹಾಕುವುದರಿಂದ ರಕ್ತಪರಿಚಲನೆ ಕಡಿಮೆಯಾಗಿ, ಕೋಲ್ಡ್ ಬರ್ನ್ ಗೂ ಇದು ಕಾರಣವಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read