ನೆಚ್ಚಿನ ಸಂಗಾತಿ ಪಡೆಯಲು ಇಲ್ಲಿದೆ ಸುಲಭ ಪರಿಹಾರ

ಅನೇಕ ಬಾರಿ ನಾವು ಬಯಸಿದ ಸಂಗಾತಿ ನಮಗೆ ಸಿಗುವುದಿಲ್ಲ. ಕುಟುಂಬಸ್ಥರ ಕಾರಣಕ್ಕೆ ಅಥವಾ ಮತ್ತ್ಯಾವುದೋ ಕಾರಣಕ್ಕೆ ಬಯಸಿದ ಸಂಗಾತಿ ಸಿಗುವುದಿಲ್ಲ. ನಿಮಗೂ ಇದೇ ಸಮಸ್ಯೆಯಾದಲ್ಲಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಜ್ಯೋತಿಷ್ಯ ಶಾಸ್ತ್ರದ ಸಹಾಯದಿಂದ ನಿಮಗಿಷ್ಟವಾಗುವ ಸಂಗಾತಿಯನ್ನು ನೀವು ಪಡೆಯಬಹುದು.

ಹುಡುಗಿ ಅಥವಾ ಹುಡುಗನನ್ನು ನೋಡಲು ಹೋಗುವ ಹಿಂದಿನ ದಿನ ರಾತ್ರಿ ಊಟದ ನಂತ್ರ ಕೇವಲ ಹಾಲನ್ನು ಕುಡಿಯಿರಿ. ನಂತ್ರ ಶ್ರೀರಾಮ ಹಾಗೂ ಸೀತಾ ಮಾತೆಯ ಫೋಟೋದ ಮುಂದೆ ಧೂಪ ಹಾಗೂ ಒಂದು ದೀಪವನ್ನು ಹಚ್ಚಿ. ಜಾನಕಿ ಜೀವನ ರಾಮ್ ಮಂತ್ರವನ್ನು ಜಪಿಸಿ.

ಮರುದಿನ ಭಗವಂತ ರಾಮ ಹಾಗೂ ಸೀತೆ ಮುಂದೆ ಧೂಪ ಹಾಗೂ ದೀಪವನ್ನು ಹಚ್ಚಿ ಬಲಗೈನ ಮಧ್ಯ ಬೆರಳಿಗೆ ಕಾಡಿಗೆಯ ಬಿಂದಿಯನ್ನಿಟ್ಟು ‘ಓಂ ನಮೋ ಭಗವತೇ ವಾಸುದೇವಾಯ ನಮಃ’ ಮಂತ್ರವನ್ನು ಜಪಿಸಿ.

ಗುರುವಾರ ಕನ್ಯೆಯರು ಗುರು ಬೃಹಸ್ಪತಿ ಪೂಜೆ ಮಾಡಬೇಕು. ಹಳದಿ ವಸ್ತು ಹಾಗೂ ಬಾಳೆಹಣ್ಣು ಸೇರಿದಂತೆ ಹಳದಿ ಆಹಾರವನ್ನು ಗುರು ಬೃಹಸ್ಪತಿಗೆ ಅರ್ಪಿಸಬೇಕು. ವೃತದ ಜೊತೆಗೆ ಆಕಳ ತುಪ್ಪದ ದೀಪವನ್ನು ಹಚ್ಚಬೇಕು. ಗುರುವಾರ ನೀರಿಗೆ ಅರಿಶಿನ ಬೆರೆಸಿ ಹುಡುಗಿಯರು ಸ್ನಾನ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read