ಇಲ್ಲಿದೆ ‘ಸ್ಟ್ರೆಚ್ ಮಾರ್ಕ್ಸ್’ ಸಮಸ್ಯೆಗೆ ಸುಲಭ ಉಪಾಯ…!

ತಾಯಂದಿರ ಸೌಂದರ್ಯಕ್ಕೊಂದು ಕಪ್ಪು ಚುಕ್ಕೆ ಸ್ಟ್ರೆಚ್ ಮಾರ್ಕ್ಸ್. ಈ ಮಾರ್ಕ್ಸ್ ನಿಂದಾಗಿ ಮಹಿಳೆಯರಿಗೆ ತಮಗಿಷ್ಟವಾಗುವ ಬಟ್ಟೆ ಧರಿಸೋಕೆ ಕಷ್ಟವಾಗುತ್ತದೆ. ಸ್ಟ್ರೆಚ್ ಮಾರ್ಕ್ಸ್ ಕಾಣುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಮೈ ತುಂಬಾ ಬಟ್ಟೆ ಹಾಕಿಕೊಳ್ತಾರೆ.

ಸ್ಥೂಲಕಾಯದಿಂದಲೂ ಸೊಂಟ ಹಾಗೂ ಕಾಲುಗಳ ಮೇಲೆ ಇದು ಕಾಣಿಸಿಕೊಳ್ಳುತ್ತದೆ. ಸ್ಟ್ರೆಚ್ ಮಾರ್ಕ್ಸ್ ಹೊಗಲಾಗಿಡಲು ಅನೇಕ ಕ್ರೀಂ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದ್ರೆ ಅವುಗಳ ಮೇಲೆ ಸಂಪೂರ್ಣ ಭರವಸೆ ಇಡೋದು ಕಷ್ಟ. ಆದ್ರೆ ನಿಮ್ಮ ಸಮಸ್ಯೆಗೆ ಅಲೋವೇರಾ ಸಂಪೂರ್ಣ ಪರಿಹಾರ ನೀಡಬಲ್ಲದು.

ಅಲೋವೇರಾ ಕ್ರೀಂ ಮಾಡಲು ಬೇಕಾಗುವ ಸಾಮಗ್ರಿ : 1 ಕಪ್ ತೆಂಗಿನಕಾಯಿ ಎಣ್ಣೆ, ಒಂದು ಲೋಟ ಕತ್ತರಿಸಿದ ಅಲೋವೇರಾ ಜೆಲ್.

ಕ್ರೀಂ ಮಾಡುವ ವಿಧಾನ : ಮೊದಲು ಒಂದು ಪಾತ್ರೆಗೆ ತೆಂಗಿನ ಎಣ್ಣೆಯನ್ನು ಹಾಕಿ ಅದನ್ನು ಬಿಸಿ ಮಾಡಿ. ಇದಕ್ಕೆ ಅಲೋವೇರಾ ತುಣುಕುಗಳನ್ನು ಹಾಕಿ 15-20 ನಿಮಿಷಗಳ ಕಾಲ ಬಿಸಿ ಮಾಡಿ. ತಳ ಹಿಡಿಯದಂತೆ ಈ ಮಿಶ್ರಣ ಬಿಸಿಯಾಗುವರೆಗೂ ಕೈ ಆಡಿಸುತ್ತಿರಿ. ನಂತ್ರ ಮಿಶ್ರಣ ತಣ್ಣಗಾಗಲು ಬಿಡಿ. ನಂತ್ರ ಏರ್ ಟೈಟ್ ಬಾಟಲಿಯಲ್ಲಿ ಹಾಕಿ. ಈ ಮಿಶ್ರಣವನ್ನು ನೀವು ಒಂದು ತಿಂಗಳವರೆಗೆ ಇಡಬಹುದು. ಈ ಮಿಶ್ರಣವನ್ನು ರಾತ್ರಿ ಮಲಗುವ ವೇಳೆ ಸ್ಟ್ರೆಚ್ ಮಾರ್ಕ್ಸ್ ಜಾಗಕ್ಕೆ ಹಚ್ಚಿಕೊಳ್ಳಿ. ಸ್ನಾನದ ವೇಳೆ ಸರಿಯಾಗಿ ಸ್ವಚ್ಛಗೊಳಿಸಿಕೊಳ್ಳಿ. ಎರಡು ಮೂರು ತಿಂಗಳ ಕಾಲ ಇದನ್ನು ಹಚ್ಚಿದ್ರೆ ಸ್ಟ್ರೆಚ್ ಮಾರ್ಕ್ಸ್ ನಿಂದ ಮುಕ್ತಿ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read