ಎಣ್ಣೆ ತ್ವಚೆ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ನೀವು ಎಣ್ಣೆ ತ್ವಚೆ ಹೊಂದಿರುವವರೇ..? ಮೇಕಪ್ ಮಾಡಿದ ಕೆಲವೇ ನಿಮಿಷಗಳಲ್ಲೇ ಅದೆಲ್ಲಾ ಕರಗಿ ಹೋದಂತಾಗಿ ಬೇಸರ ಮೂಡುತ್ತಿದೆಯೇ..? ಹಾಗಿದ್ದರೆ ಇಲ್ಲಿ ಕೇಳಿ

ಹದಿಹರೆಯದವರಲ್ಲಿ ಮೊಡವೆ ಮೂಡುತ್ತಿರುವವರಲ್ಲಿ ಎಣ್ಣೆ ತ್ವಚೆಯ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವು ಸರಳವಾದ ಫೇಸ್ ಪ್ಯಾಕ್ ಗಳನ್ನು ಹಾಕಿಕೊಳ್ಳುವ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಕಡಲೆ ಹಿಟ್ಟಿಗೆ ಕಲಬೆರಕೆ ಇಲ್ಲದ ಉತ್ತಮ ಗುಣಮಟ್ಟದ ಅರಶಿನ ಪುಡಿ ಎರಡು ಚಿಟಿಕೆ ಸೇರಿಸಿ. ಇದಕ್ಕೆ ನಿಂಬೆ ಸಿಪ್ಪೆಯನ್ನು ಒಣಗಿಸಿ ಮಾಡಿಟ್ಟುಕೊಂಡ ಪುಡಿಯನ್ನೂ ಸೇರಿಸಿ. ಒಂದೆರಡು ಹನಿ ಟೀ ಟ್ರೀ ಎಣ್ಣೆ ಹಾಕಿ. ಚೆನ್ನಾಗಿ ಬೆರೆಸಿ. ವಾರಕ್ಕೆರಡು ಬಾರಿ ಇದರ ಫೇಸ್ ಪ್ಯಾಕ್ ಮಾಡಿಕೊಳ್ಳಿ.

ಬೇವಿನ ಎಲೆಯನ್ನು ಒಣಗಿಸಿ ಪುಡಿ ಮಾಡಿ. ಬಳಿಕ ಎರಡು ಚಮಚ ಮುಲ್ತಾನಿ ಮಿಟ್ಟಿ ಹಾಕಿ. ಪೇಸ್ಟ್ ತಯಾರಿಸಿ ಹಚ್ಚಿಕೊಂಡರೆ ನಿಮ್ಮ ಎಣ್ಣೆಯ ತ್ವಚೆಯಿಂದ ಮುಕ್ತಿ ಸಿಗುವುದು ಮಾತ್ರವಲ್ಲ, ಮೊಡವೆಯಂಥ ಸಮಸ್ಯೆಗಳೂ ದೂರವಾಗುತ್ತದೆ. ಇದನ್ನು ಶೇಖರಿಸಿಯೂ ಇಟ್ಟುಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read