ಹೇಳದೇ ಕೇಳದೇ ಬರುವ ಬಿಕ್ಕಳಿಕೆಯು ಒಮ್ಮೊಮ್ಮೆ ಅತಿ ಕೆಟ್ಟದಾಗಿ ಪರಿಣಮಿಸಬಹುದು. ಡಯಾಫ್ರಾಮ್ ಸ್ನಾಯುಗಳು ಕೆಲ ಕಾಲ ಅನುದ್ದಿಷ್ಟವಾಗಿ ಕುಗ್ಗುವುದರಿಂದ ಹಲವು ಬಾರಿ ಅದನ್ನು ನಿವಾರಣೆ ಮಾಡುವುದೇ ಕಷ್ಟವಾಗುತ್ತೆ.
ಬಿಕ್ಕಳಿಕೆ ನಿವಾರಿಸಲು ಮನೆಮದ್ದು ಹಾಗೂ ಹಲವು ಸುಲಭ ಪರಿಹಾರಗಳಿವೆ. ಅವು ಯಾವುವು ಅಂತ ನೋಡಿ.
ಒಂದು ಚಮಚ ಸಕ್ಕರೆ
ತಕ್ಷಣಕ್ಕೆ ಬಿಕ್ಕಳಿಕೆ ನಿಲ್ಲಿಸಬೇಕೆಂದರೆ ಒಂದು ಚಮಚ ಸಕ್ಕರೆ ತಿನ್ನಬೇಕು.
ಆಳವಾಗಿ ಉಸಿರಾಡಿ
ಇನ್ನು, ಬಿಕ್ಕಳಿಕೆಯನ್ನು ತಕ್ಷಣವೇ ನಿಲ್ಲಿಸಲು ಮತ್ತೊಂದು ಹಳೆಯ ಹಾಗೂ ಉತ್ತಮ ಪರಿಹಾರವೆಂದರೆ ಆಳವಾಗಿ ಉಸಿರಾಡುವುದು.
ನೀರು ಕುಡಿಯಿರಿ
ಒಂದು ಲೋಟ ತುಂಬ ನೀರು ಕುಡಿಯಿರಿ. ಇನ್ನು, ನೀರು ಕುಡಿಯುವಾಗ ಬೇರೆ ಏನನ್ನೋ ಯೋಚಿಸುತ್ತಿರಬೇಕು. ಹೀಗಾಗಿ, ಇದೂ ಕೂಡ ಬಿಕ್ಕಳಿಕೆ ನಿಲ್ಲಿಸಲು ಪ್ರಮುಖ ವಿಧಾನವಾಗಿದೆ.
ವ್ಯಕ್ತಿಯನ್ನು ಹೆದರಿಸಿ
ಬಿಕ್ಕಳಿಕೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಹೆದರಿಸಿದರೆ ಅವನ ಅಥವಾ ಅವಳ ಗಮನ ಬೇರೆ ಕಡೆಗೆ ಕೇಂದ್ರೀಕರಿಸುತ್ತದೆ. ಇದರಿಂದಾಗಿ ಬಿಕ್ಕಳಿಕೆ ಕ್ರಮೇಣವಾಗಿ ನಿಲ್ಲುತ್ತದೆ.
ಹುಳಿಯ ಪದಾರ್ಥ ತಿನ್ನಿ
ವಿನೇಗರ್ ಅಥವಾ ನಿಂಬೆ ಹಣ್ಣನ್ನು ತಿನ್ನಬಹುದು. ಇದರಿಂದಾಗಿ ಉಸಿರಾಟಕ್ಕೆ ಅಡಚಣೆಯುಂಟಾಗಲಿದ್ದು, ಬಿಕ್ಕಳಿಕೆ ನಿಲ್ಲುತ್ತದೆ.
- ಉಸಿರು ಹಿಡಿದುಕೊಳ್ಳಿ
- ಉಸಿರನ್ನು ಹಿಡಿದುಕೊಳ್ಳುವುದು ಬಿಕ್ಕಳಿಕೆ ನಿಲ್ಲಿಸಲು ಪರಿಣಾಮಕಾರಿ ವಿಧಾನವಾಗಿದೆ.
- ತಣ್ಣೀರು ಅಥವಾ ನಿಂಬೆಹಣ್ಣು
- ತಣ್ಣೀರು ಕುಡಿಯುವುದು ಅಥವಾ ನಿಂಬೆಹಣ್ಣು ತಿನ್ನುವುದು ಬಿಕ್ಕಳಿಕೆಯನ್ನು ತಕ್ಷಣವೇ ನಿಲ್ಲಿಸುತ್ತದೆ.
- ಸಕ್ಕರೆ ಅಥವಾ ಜೇನುತುಪ್ಪ:
- ಸಕ್ಕರೆ ಅಥವಾ ಜೇನುತುಪ್ಪವನ್ನು ಸೇವಿಸುವುದು ಬಿಕ್ಕಳಿಕೆಯನ್ನು ತಕ್ಷಣವೇ ನಿಲ್ಲಿಸುತ್ತದೆ.
- ಸರಳ ವಿಧಾನಗಳು, ಪರಿಣಾಮಕಾರಿ ಫಲಿತಾಂಶಗಳು: ನಾಲಿಗೆ ಎಳೆಯುವುದು, ಕಿವಿ ಮುಚ್ಚುವುದು, ಕಾಗದದ ಚೀಲದಲ್ಲಿ ಉಸಿರಾಡುವುದು ಬಿಕ್ಕಳಿಕೆ ನಿಲ್ಲಿಸಲು ಸಹಾಯ ಮಾಡುತ್ತದೆ.