ಮಾತು ಮಾತಿಗೆ ಬರುವ ಕೋಪ ನಿವಾರಣೆಗೆ ಇಲ್ಲಿದೆ ವಾಸ್ತು ಉಪಾಯ

ಕೆಲವರು  ಮಾತು ಮಾತಿಗೆ ಕೋಪಗೊಳ್ತಾರೆ. ಈ ಕೋಪ ಸಂಬಂಧವನ್ನು ಹಾಳು ಮಾಡುವ ಜೊತೆಗೆ ಅವ್ರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಕೋಪ ಮನುಷ್ಯನ ಜೀವನವನ್ನು ಹಾಳು ಮಾಡುತ್ತದೆ.

ಕೋಪವನ್ನು ನಿಯಂತ್ರಿಸಿಕೊಳ್ಳಲು ಕೆಲವರು ಅನೇಕ ಪ್ರಯತ್ನಗಳನ್ನು ಮಾಡ್ತಾರೆ. ಆದ್ರೆ ಯಾವುದೂ ಫಲ ನೀಡುವುದಿಲ್ಲ. ಕೆಲವೊಂದು ವಾಸ್ತು ಉಪಾಯಗಳು ನಿಮ್ಮ ಕೋಪ ನಿವಾರಣೆಗೆ ಸಹಾಯಕವಾಗಲಿದೆ.

ವಾಸ್ತು ಶಾಸ್ತ್ರದ ಪ್ರಕಾರ, ಯಾರಿಗೆ ಹೆಚ್ಚು ಕೋಪ ಬರುತ್ತದೆಯೋ ಅವ್ರು ಕೆಂಪು ಬಣ್ಣ ಬಳಕೆಯನ್ನು ಕಡಿಮೆ ಮಾಡಬೇಕು. ಮನೆ ಗೋಡೆ, ಬಾಗಿಲಿಗೆ ಬಣ್ಣ ಹಾಗೂ ಕಿಟಕಿ, ಬಾಗಿಲಿನ ಪರದೆ, ಕುಷನ್ ಗಳು ಕೆಂಪು ಬಣ್ಣದಲ್ಲಿರದಂತೆ ನೋಡಿಕೊಳ್ಳಿ.

ವಾಸ್ತು ಶಾಸ್ತ್ರದ ಪ್ರಕಾರ ಕೊಳಕು ಕೂಡ ಕೋಪಕ್ಕೆ ಕಾರಣವಾಗುತ್ತದೆ. ಮನೆಯ ಪ್ರತಿಯೊಂದು ಭಾಗ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿರದಂತೆ ಎಚ್ಚರಿಕೆ ವಹಿಸಿ.

ಮನೆಯ ಪೂರ್ವ ದಿಕ್ಕಿಗೆ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ದೀಪವನ್ನು ಬೆಳಗಬೇಕು. ಇದು ಕೋಪವನ್ನು ನಿಯಂತ್ರಿಸಲು ನೆರವಾಗುತ್ತದೆಯಂತೆ.

ಹೆಚ್ಚು ಕೋಪ ಬರ್ತಿದ್ದಂತೆ ನಿಯಮಿತ ರೂಪದಲ್ಲಿ ಸೂರ್ಯನಿಗೆ ಜಲವನ್ನು ಅರ್ಪಿಸಿ. ಇದ್ರಿಂದ ಮನಸ್ಸು ಶಾಂತಗೊಳ್ಳುತ್ತದೆ. ಪ್ರತಿ ದಿನ ಹೀಗೆ ಮಾಡಿದ್ರೆ ಕೋಪ ಕಡಿಮೆಯಾಗುತ್ತದೆ.

ಪದೇ ಪದೇ ಕೋಪ ಬರ್ತಿದ್ದರೆ ಸೋಮವಾರ ವೃತ ಮಾಡಿ. ಸೋಮವಾರ ಒಂದು ಸಮಯ ಮಾತ್ರ ಆಹಾರ ಸೇವನೆ ಮಾಡಿ. ಚಂದ್ರನಿಗೆ ಅರ್ಘ್ಯ ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read