ʼಬಿಳಿ ಗುಳ್ಳೆʼ ಸಮಸ್ಯೆ ನಿವಾರಣೆಗೆ ಇಲ್ಲಿದೆ ಉಪಾಯ

ಇದು ಫ್ಯಾಷನ್ ಯುಗ. ಇದರಲ್ಲಿ ಹಿಂದೆ ಬೀಳಲು ಯಾರೂ ಇಷ್ಟಪಡುವುದಿಲ್ಲ. ಆದ್ರೆ ಸಮಯದ ಅಭಾವದಿಂದಾಗಿ ಚರ್ಮದ ಆರೈಕೆಗೆ ಗಮನ ನೀಡಲು ಸಾಧ್ಯವಾಗ್ತಿಲ್ಲ. ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಎದುರಾಗ್ತಿವೆ. ಮೊಡವೆ, ಕಪ್ಪು ಕಲೆಗಳ ಜೊತೆಗೆ ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಬಿಳಿ ಗುಳ್ಳೆಗಳೂ ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ.

ಬಿಳಿ ಗುಳ್ಳೆಗಳು ಚರ್ಮದ ಸಮಸ್ಯೆಯಾಗಿದೆ. ಸಣ್ಣದಾಗಿರುವ ಈ ಗುಳ್ಳೆಗಳು ಎಲ್ಲ ವಯಸ್ಸಿನಲ್ಲಿಯೂ ಕಾಣಿಸಿಕೊಳ್ಳುತ್ತದೆ. ಚರ್ಮ ಸ್ವಚ್ಛವಾಗಿಲ್ಲದಿದ್ದರೆ ಈ ಸಮಸ್ಯೆ ಬಹು ಬೇಗ ಕಾಣಿಸಿಕೊಳ್ಳುತ್ತದೆ. ಒಣ ಚರ್ಮದವರಲ್ಲಿ ಈ ಗುಳ್ಳೆ ಕಾಣಿಸಿಕೊಳ್ಳುವುದು ಹೆಚ್ಚು. ಹಾಗಾಗಿ ಪ್ರತಿದಿನ ಕನಿಷ್ಠ ಎರಡು ಬಾರಿ ಮುಖವನ್ನು ತೊಳೆಯುವುದು ಒಳ್ಳೆಯದು.

ಕೆಲವರು ಕಡಿಮೆ ಬೆಲೆಗೆ ಸಿಗುವ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಇದರಿಂದ ಚರ್ಮದಲ್ಲಿ ಸಮಸ್ಯೆಯಾಗಿ ಬಿಳಿ ಗುಳ್ಳೆಗಳು ಏಳುತ್ತವೆ. ಉತ್ತಮ ಸೌಂದರ್ಯವರ್ಧಕಗಳನ್ನು ಬಳಸಿದ್ರೆ ಅವು ಬಿಳಿ ಗುಳ್ಳೆಗಳು ಮೇಲೇಳದಂತೆ ತಡೆಯುತ್ತವೆ.

ಬಿಳಿ ಗುಳ್ಳೆಗಳು ಮೊಡವೆಗಳಲ್ಲ. ಕೊಳಕು ಚರ್ಮ ಹಾಗೂ ಡೆಡ್ ಸ್ಕಿನ್ ನಿಂದ ಇವು ಕಾಣಿಸಿಕೊಂಡಿರುತ್ತದೆ. ಹಾಗಾಗಿ ಅವುಗಳನ್ನು ಕೈನಲ್ಲಿ ಮುಟ್ಟಬಾರದು. ಹಾಗೆ ಮಾಡಿದಲ್ಲಿ ಸಮಸ್ಯೆ ಜಾಸ್ತಿಯಾಗುತ್ತದೆ. ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಕೆಲವರು ಬಿಳಿ ಗುಳ್ಳೆ ಕಾಣದಂತೆ ಮೇಕಪ್ ಮಾಡಿಕೊಳ್ತಾರೆ. ಹೀಗೆ ಮಾಡುವುದರಿಂದ ಚರ್ಮದ ರಂಧ್ರಗಳು ಮುಚ್ಚಿ ಸಮಸ್ಯೆ ಜಾಸ್ತಿಯಾಗುತ್ತದೆ. ಹಾಗಾಗಿ ಕಡಿಮೆ ಮೇಕಪ್ ಮಾಡುವುದು ಒಳ್ಳೆಯದು.

ಸಮಸ್ಯೆ ಜಾಸ್ತಿಯಾಗಿದ್ದರೆ ಚರ್ಮ ರೋಗ ತಜ್ಞರನ್ನು ಭೇಟಿ ಮಾಡಿ. ಅವರು ಕ್ರೈಯೊಥೆರಪಿ ಮಾಡಲು ಸಲಹೆ ನೀಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read