ಚಳಿಗಾಲದಲ್ಲಿನ ‘ಚರ್ಮದ ಸಮಸ್ಯೆ’ ಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ಚಳಿಗಾಲ ಬಂತೆಂದರೆ ಸಾಕು ಅದರೊಟ್ಟಿಗೆ ಹಲವಾರು ಚರ್ಮದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿರುವ ತೇವಾಂಶದ ಕೊರತೆಯಿಂದಾಗಿ ನಿಮ್ಮ ಚರ್ಮದ ನೈಸರ್ಗಿಕ ತೇವಾಂಶವನ್ನು ಹೀರಿಕೊಳ್ಳುತ್ತದೆ.

ಅದಕ್ಕೆಂದೇ ಚರ್ಮದ ಶುಷ್ಕತೆಯನ್ನು ಕಾಪಾಡಿಕೊಳ್ಳಬಹುದಾದಂತಹ ನೈಸರ್ಗಿಕ ವಿಧಾನಗಳು ಇಲ್ಲಿವೆ. ಇದಕ್ಕೆ ಬೇಕಾಗಿರುವುದು ನಮ್ಮ ಮನೆಗಳಲ್ಲೇ ಸಿಗುವಂತಹ ಹಣ್ಣುಗಳಿಂದ ತಯಾರಿಸಿಕೊಳ್ಳಬಹುದಾದಂತಹ ಪ್ಯಾಕ್ ಗಳು. ಹಣ್ಣುಗಳಲ್ಲಿ ಸಹಜವಾಗಿಯೇ ಆ್ಯಂಟಿ-ಆಕ್ಸಿಡೆಂಟ್ಸ್ ಇರುವುದರಿಂದ ಚರ್ಮಕ್ಕೆ ಬೇಕಾದ ತೇವಾಂಶವನ್ನು ನೀಡಿ, ಶುಷ್ಕತೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತವೆ.

ದಾಳಿಂಬೆ ಹಣ್ಣು : 1 ಚಮಚ ದಾಳಿಂಬೆ ರಸವನ್ನು ½ ಚಮಚ ಕಡಲೆಹಿಟ್ಟಿನೊಂದಿಗೆ ಮಿಶ್ರಣ ಮಾಡಿ, ತ್ವಚೆಯ ಮೇಲೆ ಹಚ್ಚಿ, 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನೀರಿನಿಂದ ತೊಳೆದುಕೊಳ್ಳಿ.

ಕಿತ್ತಳೆ ಹಣ್ಣು : 2 ಚಮಚ ಆ್ಯಲೊವೆರಾ ಜೆಲ್, 1 ಚಮಚ ಕಿತ್ತಳೆ ರಸವನ್ನು ಮಿಕ್ಸ್ ಮಾಡಿ, ಮುಖಕ್ಕೆ ಲೇಪಿಸಿ. 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನೀರಿನಿಂದ ತೊಳೆದುಕೊಳ್ಳಿ. ನಂತರ ಮಾಯಿಶ್ಚರೈಸರ್ ಅಪ್ಲೈ ಮಾಡಿ.

ಸೇಬು : ½ ಸೇಬಿನ ತುಂಡನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ,  1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ಈ ಮಿಶ್ರಣವನ್ನು ತ್ವಚೆಗೆ ಅಪ್ಲೈ ಮಾಡಿ. 10-15 ನಿಮಿಷ ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆಯಿರಿ.

ಸ್ಟ್ರಾಬೆರಿ : ಚೆನ್ನಾಗಿ ಮಾಗಿದ ಸ್ಟ್ರಾಬೆರಿ ಹಣ್ಣನ್ನು 1 ಚಮಚ ರೋಸ್ ವಾಟರ್ ಜೊತೆ ಮಿಶ್ರ ಮಾಡಿ, ಫೇಸ್ ಪ್ಯಾಕ್ ನಂತೆ ಅಪ್ಲೈ ಮಾಡಿ. 15 ನಿಮಿಷಗಳ ನಂತರ ವಾಶ್ ಮಾಡಿಕೊಳ್ಳಿ.

ಈ ಸರಳವಾದ ವಿಧಾನಗಳನ್ನು ವಾರದಲ್ಲಿ ಒಮ್ಮೆ ಅನುಸರಿಸಿದರೆ, ಡ್ರೈ ಸ್ಕಿನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read