ಬೇಸಿಗೆಯಲ್ಲಿ ಕೂದಲು ರಕ್ಷಣೆಗೆ ಇಲ್ಲಿದೆ ʼಮನೆ ಮದ್ದುʼ

ವಾತಾವರಣದ ಧೂಳು ಮತ್ತಿತರ ವಿಷಯಗಳಿಂದ ನಮ್ಮ ದೇಹವನ್ನು, ತ್ವಚೆಯನ್ನು ಕಾಪಾಡುವುದು ಬಹು ದೊಡ್ಡ ಸವಾಲಿನ ಕೆಲಸವೂ ಹೌದು. ಅದರಲ್ಲೂ ಸೂಕ್ಷ್ಮ ತ್ವಚೆಯ ಮಹಿಳೆಯರು ಈ ಸಮಯದಲ್ಲಿ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.

ಇಂದಿನ ಒತ್ತಡದ ಬದುಕಲ್ಲಿ ಅದು ಕಷ್ಟವಾದರೂ, ಸರಳವಾಗಿ ಜೀವನ ಶೈಲಿಯನ್ನು ಸುಲಭಗೊಳಿಸಿಕೊಳ್ಳುವ ಬಗೆಯನ್ನು ತಿಳಿಯೋಣ.

ಕೇಶ ರಾಶಿಯ ಬಗ್ಗೆ ಕಾಳಜಿ ವಹಿಸಲು ಇದು ಸಕಾಲ. ಬೇಸಿಗೆಯ ಬೆವರಿಗೆ ಒದ್ದೆಯಾಗುವ ತಲೆ ತನ್ನ ಕೂದಲನ್ನು ಉದುರಿಸುತ್ತದೆ. ಮಾತ್ರವಲ್ಲ ಹೊಟ್ಟು ಹೆಚ್ಚಳಕ್ಕೂ ಕಾರಣವಾಗುತ್ತದೆ.

ಒಣ ಕೂದಲು, ತುದಿ ಸೀಳುವಿಕೆ ಮತ್ತಿತರ ಸಮಸ್ಯೆಗಳಿಗೆ ಕರಿಬೇವಿನಲ್ಲಿ ಉತ್ತರವಿದೆ. ಇದರಲ್ಲಿರುವ ವಿಟಮಿನ್ ಗಳು ನಮ್ಮ ದೇಹಕ್ಕೂ, ಸೌಂದರ್ಯಕ್ಕೂ ಬಹಳ ಉಪಕಾರಿ. ಕೂದಲಿಗೆ ಬೇಕಾದ ಪೋಷಕಾಂಶಗಳು ಕರಿಬೇವಿನಲ್ಲಿದೆ.

ಇದನ್ನು ಜಜ್ಜಿ ರಸ ತೆಗೆದು ನಾಲ್ಕು ಚಮಚ ಕೊಬ್ಬರಿ ಎಣ್ಣೆಗೆ ಬೆರೆಸಿ ಒಲೆಯ ಮೇಲಿಟ್ಟು ನೀರಿನಂಶ ಹೋಗುವ ತನಕ ಬಿಸಿ ಮಾಡಬೇಕು. ಆರಿದ ಬಳಿಕ ಕೂದಲಿಗೆ ಹಚ್ಚಿ ಮಸಾಜ್ ಮಾಡಬೇಕು. ಎರಡು ಗಂಟೆ ಬಿಟ್ಟು ತಲೆ ತೊಳೆಯಬೇಕು. ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ಕೂದಲು ಕಪ್ಪಾಗಿ ಸೊಂಪಾಗಿ ಬೆಳೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read