ಚಿಮಕಲು ಮಚ್ಚೆಯಿಂದ ಮುಕ್ತಿ ಪಡೆಯಲು ಇದೆ ಮನೆ ಮದ್ದು

ತುಟಿಯ ಬದಿಯಲ್ಲೊಂದು ಸಣ್ಣ ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಆದ್ರೆ ಮುಖದ ಅನೇಕ ಭಾಗದಲ್ಲಿ ಮಚ್ಚೆಗಳು ಕಾಣಿಸಿಕೊಂಡ್ರೆ ತಲೆನೋವು ಶುರುವಾಗುತ್ತದೆ. ಕೆಲವರ ಮುಖ, ಕೈ, ಮೈ, ಕುತ್ತಿಗೆ ಭಾಗಗಳಲ್ಲಿ ಇದ್ದಕ್ಕಿದ್ದ ಹಾಗೆ ಚಿಮಕಲು ಮಚ್ಚೆಗಳು ಏಳಲು ಶುರುವಾಗುತ್ತವೆ.

ಈ ಚಿಮಕಲು ಮಚ್ಚೆಯಿಂದ ಮುಕ್ತಿ ಪಡೆಯಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ.

ವಿಟಮಿನ್ ಇ : ಚಿಮಕಲು ಮಚ್ಚೆ ತೆಗೆದು ಹಾಕಲು ವಿಟಮಿನ್ ಇ ಸಹಾಯಕಾರಿ. ವಿಟಮಿನ್ ಇ ತೈಲಕ್ಕೆ ಶುಂಠಿ ಬೆರೆಸಿ ಚಿಮಕಲು ಮಚ್ಚೆ ಮೇಲೆ ಮಸಾಜ್ ಮಾಡಿ. ಒಂದೆರಡು ವಾರದಲ್ಲಿಯೇ ಇದ್ರ ಫಲಿತಾಂಶವನ್ನು ನೀವು ಕಾಣಬಹುದು.

ಒಣಗಿದ ಅಂಜೂರ : ದಿನಕ್ಕೆ ನಾಲ್ಕು ಬಾರಿ ಒಣಗಿದ ಅಂಜೂರದ ರಸವನ್ನು ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತ್ರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಮೆಂತ್ಯೆ : ಒಣಗಿನ ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಿರಿ. ಇದು ಚಿಮಕಲು ಮಚ್ಚೆ ಕಡಿಮೆ ಮಾಡುವ ಜೊತೆಗೆ ಆರೋಗ್ಯ ವೃದ್ಧಿ ಮಾಡುತ್ತದೆ.

ಆ್ಯಪಲ್ ವಿನೆಗರ್ : ಒಂದು ಹತ್ತಿಗೆ ಆ್ಯಪಲ್ ವಿನೆಗರ್ ಹಾಕಿ 15 ನಿಮಿಷಗಳ ಕಾಲ ಚಿಮಕಲು ಮಚ್ಚೆ ಮೇಲಿಡಿ. ಪ್ರತಿದಿನ ಹೀಗೆ ಮಾಡುತ್ತ ಬಂದಲ್ಲಿ ವಾರದೊಳಗೆ ಚಿಮಕಲು ಮಚ್ಚೆ ಮಾಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read