ಬಿ.ಪಿ. ನಿಯಂತ್ರಣಕ್ಕೆ ಇಲ್ಲಿದೆ ʼಮನೆ ಮದ್ದುʼ

ಎಲ್ಲರ ಅಡುಗೆ ಮನೆಯಲ್ಲಿಯೂ ನಿಂಬೆ ಇದ್ದೇ ಇರುತ್ತದೆ. ವಿಟಮಿನ್ ಸಿಯಿಂದ ತುಂಬಿರುವ ನಿಂಬೆ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿಯಿಂದ ಹಿಡಿದು ಸೌಂದರ್ಯ ವರ್ಧಕವಾಗಿ ಇದು ಕೆಲಸ ಮಾಡುತ್ತದೆ. ಕೆಲವೊಂದು ಪವಾಡದ ಕೆಲಸಗಳನ್ನು ಇದು ಮಾಡುತ್ತೆ ಎಂದ್ರೆ ತಪ್ಪಾಗಲಾರದು.

ರಕ್ತದೊತ್ತಡ : ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ರಾತ್ರಿ ಮಗಲುವ ವೇಳೆ ಬೆಡ್ ಬಳಿ ನಿಂಬೆ ಹೋಳನ್ನಿಟ್ಟು ಮಲಗಬೇಕು. ಬೆಳಿಗ್ಗೆ ಸುಸ್ತು ದೂರವಾಗಿ ಫ್ರೆಶ್ ಮುಂಜಾವು ನಿಮ್ಮನ್ನು ಸ್ವಾಗತಿಸುತ್ತದೆ. ನಿಂಬೆ ಹಣ್ಣಿನ ಸುವಾಸನೆ ಇದಕ್ಕೆ ಕಾರಣ.

ನಿದ್ರಾಹೀನತೆ : ಒತ್ತಡದ ಜೀವನದಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾತ್ರಿ ಸರಿಯಾಗಿ ನಿದ್ರೆ ಬರದಿದ್ದಲ್ಲಿ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಕಾಡಲು ಶುರುವಾಗುತ್ತದೆ. ನಿದ್ರಾಹೀನತೆ ಇರುವವರು ಹಾಸಿಗೆ ಬಳಿ ನಿಂಬೆ ಹೋಳನ್ನಿಟ್ಟು ಮಲಗಿ. ಮನಸ್ಸು ಶಾಂತವಾಗಿ ಸುಖ ನಿದ್ರೆ ನಿಮ್ಮನ್ನಾವರಿಸುತ್ತದೆ.

ಸೊಳ್ಳೆ : ಸಣ್ಣ ಪುಟ್ಟ ಕೀಟ ಹಾಗೂ ಸೊಳ್ಳೆಯನ್ನು ಓಡಿಸಲು ನಿಂಬೆ ಹಣ್ಣು ಬೆಸ್ಟ್. ಹಾಸಿಗೆಗೆ ಹೋಗುವ ಸ್ವಲ್ಪ ಮೊದಲು ನಿಂಬೆ ಹೋಳನ್ನು ಹಾಸಿಗೆ ಪಕ್ಕವಿಟ್ಟು ಲೈಟ್ ಆರಿಸಿ. ನಿಂಬೆ ವಾಸನೆಗೆ ಸೊಳ್ಳೆಗಳು ಓಡಿ ಹೋಗುತ್ತವೆ.

ಭಯ : ಅತಿಯಾದ ಒತ್ತಡ ಭಯ ಹುಟ್ಟಿಸುತ್ತದೆ. ಭಯದಿಂದಾಗಿ ಕೆಲವರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಅಂತವರು ಕೂಡ ಈ ನಿಂಬೆ ಹೋಳನ್ನು ಹಾಸಿಗೆ ಬಳಿಯಿಟ್ಟು ಮಲಗಿದ್ರೆ ಭಯವಿಲ್ಲದೆ ಕಣ್ಣುಮುಚ್ಚಿ ಮಲಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read