ಕಫದ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಚಳಿಗಾಲದಲ್ಲಿ ಕಫದ ಸಮಸ್ಯೆ ಬಿಡದೆ ನಿಮ್ಮನ್ನು ಕಾಡುತ್ತಿದೆಯೇ. ಹಾಗಿದ್ದರೆ ಮನೆಯಲ್ಲೇ ತಯಾರಿಸಬಹುದಾದ ಪರಿಣಾಮಕಾರಿ ಮದ್ದನ್ನು ಮಾಡುವ ವಿಧಾನ ತಿಳಿಯೋಣ.

ಹದಿನೈದರಿಂದ ಇಪ್ಪತ್ತು ಕಾಳು ಮೆಣಸನ್ನು ತುಸುವೇ ಬಿಸಿ ಮಾಡಿ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣ ಕಫವನ್ನು ಬಹುಬೇಗ ಕರಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದರ ಒಂದು ಚಮಚ ಪುಡಿಗೆ ಕಾಲು ಚಮಚ ಅರಶಿನ ಪುಡಿ ಸೇರಿಸಿ. ಇದರಲ್ಲೂ ಆಂಟಿ ಬಯೋಟಿಕ್ ಗುಣವಿದ್ದು ಕಫ ಕರಗಿಸುತ್ತದೆ. ಇದಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ. ಇದನ್ನು ಚೆನ್ನಾಗಿ ಕಲಕಿ ಮಿಶ್ರಣ ತಯಾರಿಸಿ.

ಈ ಮದ್ದನ್ನು ಬೆಳಿಗ್ಗೆ ಎದ್ದಾಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸಿ. ಆದರೆ ನೆನಪಿರಲಿ, ಇದನ್ನು ಸೇವಿಸಿದ ಬಳಿಕ ಕನಿಷ್ಠ ಅರ್ಧ ಗಂಟೆ ನೀವು ಬೇರೇನನ್ನೂ ತಿನ್ನದಿರಿ. ಅರ್ಧ ಗಂಟೆ ಬಳಿಕವೇ ಬಿಸಿ ನೀರು ಕುಡಿಯಿರಿ. ಇದರಿಂದ ನಿಮಗೆ ಉಸಿರು ಕಟ್ಟುವ, ಎದೆ ಬಿಗಿದಂತೆ ಆಗುವ ಲಕ್ಷಣಗಳು ಕಡಿಮೆಯಾಗುತ್ತವೆ.

ನಾಲ್ಕು ದಿನ ಬಿಡದೆ ಈ ಮಿಶ್ರಣವನ್ನು ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲ ಕಫ ಕೆಮ್ಮದ ಲಕ್ಷಣಗಳು ಸಂಪೂರ್ಣವಾಗಿ ದೂರವಾಗುತ್ತವೆ. ಮನೆಯಲ್ಲಿರುವ ಹಿರಿಯರಿಗೆ ಮತ್ತು ಮಕ್ಕಳಿಗೆ ಇದನ್ನು ತಿನ್ನಲು ಕೊಡಿ. ನಾಲ್ಕೇ ದಿನದಲ್ಲಿ ಅವರು ಮೊದಲಿನಂತಾಗುವುದನ್ನು ನೀವೇ ನೋಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read