ಪಾದದ ಊತ ಕಡಿಮೆ ಮಾಡಲು ಇಲ್ಲಿದೆ ಟಿಪ್ಸ್

ಮಧುಮೇಹ ಸಮಸ್ಯೆ ಇರುವವರಿಗೆ ಕೆಲವೊಮ್ಮೆ ಕಾಲು ಊದಿಕೊಂಡಿರುತ್ತದೆ. ಇದು ಕೆಲವೊಮ್ಮೆ ಗಂಭೀರ ಸಮಸ್ಯೆಯಾಗಿ ಕಾಡುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ನಿಯಮವನ್ನು ಪಾಲಿಸಿ.

*ಸಾಕ್ಸ್ ನಿಮ್ಮ ಕಾಲುಗಳಲ್ಲಿ ಸರಿಯಾದ ಪ್ರಮಾಣದ ಒತ್ತಡವನ್ನು ಕಾಪಾಡಿಕೊಳ್ಳುತ್ತದೆ. ಮತ್ತು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಇದು ಊತವನ್ನು ಕಡಿಮೆ ಮಾಡುತ್ತದೆ.

*ನೀವು ಕುಳಿತುಕೊಳ್ಳುವಾಗ ಅಥವಾ ಮಲಗುವಾಗ ನಿಮ್ಮ ಪಾದಗಳನ್ನು ಮೇಲಕ್ಕೆತ್ತಿ. ನಿಮ್ಮ ಪಾದಗಳನ್ನು ಹೃದಯದ ಮಟ್ಟಕ್ಕಿಂತ ಮೇಲಕ್ಕೆ ತನ್ನಿ. ಇದು ಪಾದಗಳಿಂದ ದ್ರವಗಳ ಮರಳುವಿಕೆಯನ್ನು ಪ್ರೇರೇಪಿಸುತ್ತದೆ.

*ಮಧುಮೇಹಿಗಳು ಪ್ರತಿದಿನ ವ್ಯಾಯಾಮ ಮಾಡಿ. ಜಡ ಜೀವನಶೈಲಿಯು ನಿಮ್ಮ ಪಾದದ ಊತವನ್ನು ಹೆಚ್ಚಿಸುತ್ತದೆ. ಆದರೆ ಪ್ರತಿದಿನ 60 ನಿಮಿಷಗಳ ಕಾಲ ವಾಕಿಂಗ್ ಮಾಡಿ. ಇದರಿಂದ ಊತ ಕಡಿಮೆಯಾಗುತ್ತದೆ.

*ಹೆಚ್ಚುವರಿ ಉಪ್ಪು ಸೇವನೆಯನ್ನು ತಪ್ಪಿಸಲು ಪ್ರಯತ್ನಿಸಿ. ನಿಮ್ಮ ಆಹಾರದ ರುಚಿ ಹೆಚ್ಚಿಸಲು ಉಪ್ಪಿನ ಬದಲು ಮಸಾಲೆಗಳನ್ನು ಸೇರಿಸಿ. ಹೆಚ್ಚು ಸೋಡಿಯಂ ಆಹಾರ ನಿಮ್ಮ ಕಾಲು ಮತ್ತು ಪಾದದ ಊತದ ಅಪಾಯವನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read