ಚೀನಾದ ಹೊಸ ನಿಗೂಢ ವೈರಸ್‌ನಿಂದ ಮಕ್ಕಳನ್ನು ರಕ್ಷಿಸಲು ಇಲ್ಲಿದೆ ಟಿಪ್ಸ್

ಕೊರೊನಾ ವೈರಸ್‌ನಂತಹ ಮಾರಕ ಸೋಂಕನ್ನು ಇಡೀ ಜಗತ್ತಿಗೇ ಹರಡಿದ್ದ ಚೀನಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕೋವಿಡ್‌ ಸೋಂಕು ಪ್ರಪಂಚದಾದ್ಯಂತ ವಿನಾಶವನ್ನೇ ತಂದಿಟ್ಟಿತ್ತು. ಈಗ ಚೀನಾದಲ್ಲಿ ಮತ್ತೊಂದು ಅಪಾಯಕಾರಿ ಸೋಂಕು ಎಗ್ಗಿಲ್ಲದೇ ಹರಡುತ್ತಿದೆ. ಮಕ್ಕಳಲ್ಲಿ ಉಸಿರಾಟದ ಕಾಯಿಲೆ ಕಾಣಿಸಿಕೊಂಡಿದೆ. ನ್ಯುಮೋನಿಯಾವನ್ನೇ ಹೋಲುವ ಈ ಕಾಯಿಲೆಯಿಂದ ಚೀನಾದಲ್ಲಿ ಲಕ್ಷಾಂತರ ಜನರು ಆಸ್ಪತ್ರೆ ಪಾಲಾಗಿದ್ದಾರೆ.

ಈ ರೋಗ ಶೀಘ್ರದಲ್ಲೇ ಭಾರತಕ್ಕೂ ವಕ್ಕರಿಸಿದರೆ ಅಚ್ಚರಿಯೇನಿಲ್ಲ. ಹಾಗಾಗಿ ಈ ಅಪಾಯವನ್ನು ಹೇಗೆ ತಪ್ಪಿಸಬಹುದು ಅನ್ನೋದನ್ನು ತಜ್ಞರೇ ವಿವರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ ಪ್ರಮುಖವಾಗಿ ಈ ವೈರಸ್‌ನಿಂದ  ಮಕ್ಕಳನ್ನು ರಕ್ಷಿಸಬೇಕಾದರೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಈ ರೋಗವು ಉಸಿರಾಟದ ಮೂಲಕ ಹರಡುವುದರಿಂದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಅನುಸರಿಸುವುದು ಮತ್ತು ಕ್ವಾರಂಟೈನ್‌ನಲ್ಲಿ ಉಳಿಯುವುದು ಕಡ್ಡಾಯ. ಇನ್‌ಫ್ಲೂಯೆಂಜಾ, ಆರ್‌ಎಚ್‌ವಿ ವೈರಸ್ ಮತ್ತು ಕೋವಿಡ್ ಲಸಿಕೆಗಳು ಈ ರೋಗವನ್ನು ತಡೆಗಟ್ಟುವ ಸಾಧನವಾಗಿರಬಹುದು, ಆದರೆ ವೈದ್ಯರನ್ನು ಸಂಪರ್ಕಿಸಿದ ನಂತರವೇ ಅದನ್ನು ತೆಗೆದುಕೊಳ್ಳಬೇಕು.

ಸ್ಥಳೀಯ ಆಡಳಿತ ಮತ್ತು ಸಮುದಾಯದ ಜನರು ಸೇರಿದಂತೆ ಕೇಂದ್ರ – ರಾಜ್ಯ ಸರ್ಕಾರಗಳು ಒಟ್ಟಾಗಿ ಈ ರೋಗವನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಜನರು ಇದರಿಂದ ಪಾರಾಗಲು ಸಾಧ್ಯ.

ವೈದ್ಯರ ಸಲಹೆಯ ಮೇರೆಗೆ ಎಂಟಿವೈರಲ್ ಔಷಧಿಗಳನ್ನು ತೆಗೆದುಕೊಳ್ಳಬಹುದು, ಇವುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಇವುಗಳ ಮೂಲಕ ರೋಗದ ಅವಧಿಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಈ ರೋಗದ ಕ್ಷಣ ಕ್ಷಣದ ಅಪ್ಡೇಟ್‌ಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ (WHO) ಸೂಚನೆಗಳನ್ನು ಗಮನಿಸಬೇಕು ಮತ್ತು ಅದನ್ನು ಅನುಸರಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read