ನಾಲಿಗೆ ಸ್ವಚ್ಚವಾಗಿಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್

ನಾವು ಆಹಾರಗಳನ್ನು ಸೇವಿಸುವುದರಿಂದ ನಾಲಿಗೆಯಲ್ಲಿ ಬಿಳಿ ಲೇಪನ ಉಂಟಾಗುತ್ತದೆ. ಇದನ್ನು ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ. ಇದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಇದನ್ನು ನಿವಾರಿಸಲು ಈ ಮನೆಮದ್ದುಗಳನ್ನು ಬಳಸಿ.

* 1 ಚಮಚ ಅಡುಗೆ ಸೋಡಾಕ್ಕೆ ಕೆಲವು ಹನಿಗಳಷ್ಟು ನೀರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಬ್ರಷ್ ನಲ್ಲಿ ತೆಗೆದುಕೊಂಡು ನಾಲಗೆಯ ಮೇಲೆ ನಿಧಾನವಾಗಿ ಉಜ್ಜಿ. ಇದರಿಂದ ಬಿಳಿ ಲೇಪನ ಮಾಯವಾಗುತ್ತದೆ.

 * 1 ಚಮಚ ಅರಶಿನ ಪುಡಿ, ಕೆಲವು ಹನಿ ನಿಂಬೆ ರಸ ವನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ಬ್ರಷ್ ನಲ್ಲಿ ತೆಗೆದುಕೊಂಡು ನಾಲಗೆಯ ಮೇಲೆ ನಿಧಾನವಾಗಿ ಉಜ್ಜಿ. ಇದರಿಂದ ಬಿಳಿ ಲೇಪನ ನಿವಾರಣೆಯಾಗುತ್ತದೆ.

* ಸಮುದ್ರದ ಉಪ್ಪನ್ನು ಪುಡಿ ಮಾಡಿ ಅದನ್ನು ಬ್ರಷ್ ನಲ್ಲಿ ತೆಗೆದುಕೊಂಡು ನಾಲಗೆಯ ಮೇಲೆ ನಿಧಾನವಾಗಿ ಉಜ್ಜಿ ತೊಳೆದರೆ ನಾಲಿಗೆ ಸ್ವಚ್ಚವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read