‌ʼಕಣ್ಣುʼಗಳ ಕೆಳಗಿನ ಕಪ್ಪು ವರ್ತುಲ ನಿವಾರಿಸಲು ಇಲ್ಲಿದೆ ಟಿಪ್ಸ್

ಕಣ್ಣುಗಳ ಕೆಳಗೆ ಕಪ್ಪುಗಟ್ಟುವುದು ಗಂಭೀರವಾದ ಸಮಸ್ಯೆ ಅಲ್ಲದೇ ಇದ್ದರೂ ಸಹ ಇವುಗಳು ನಿಮ್ಮನ್ನು ದಣಿದಂತೆ, ವಯಸ್ಸಾದಂತೆ ಹಾಗೂ ಅನಾರೋಗ್ಯಕ್ಕೀಡಾದಂತೆ ತೋರುತ್ತವೆ.

ಕಣ್ಣುಗಳ ಕೆಳಗೆ ಕಪ್ಪುಗಟ್ಟುವಿಕೆ, ಸುಕ್ಕು ಬರುವುದು ಹಾಗೂ ಇತರೆ ಬದಲಾವಣೆಗಳು ರಕ್ತನಾಳಗಳು ದುರ್ಬಲಗೊಂಡು, ಚರ್ಮದ ಮೊದಲ ಎರಡು ಪದರಗಳಲ್ಲಿ ಬಣ್ಣ ಕೆಡುವಂತೆ ಮಾಡಿದಾಗ ಆಗುತ್ತದೆ. ಈ ಸಮಸ್ಯೆಗೆ ತ್ವರಿತ ಪರಿಹಾರ ಇಲ್ಲ.

ಈ ಸಮಸ್ಯೆಗೆ ಮನೆಯಲ್ಲೇ ಕಂಡುಕೊಳ್ಳಬಹುದಾದ ಕೆಲವೊಂದು ಪರಿಹಾರಗಳು ಇಂತಿವೆ:

ಸರಿಯಾಗಿ ನಿದ್ರೆ ಮಾಡಿ.

ಆಗಾಗ ಫೇಶಿಯಲ್‌ಗಳ ಮೂಲಕ ಚರ್ಮದ ತೇವಾಂಶ ಕಾಪಾಡಿಕೊಳ್ಳಿ.

ಸತ್ವಪೂರ್ಣ ಆಹಾರ ಹಾಗೂ ನೀರಿನ ಸೇವನೆ ಚೆನ್ನಾಗಿರಲಿ.

ಕಣ್ಣುಗಳ ಮೇಲೆ ಟೀ ಬ್ಯಾಗ್‌ ಗಳು, ಸೌತೆಕಾಯಿ ಅಥವಾ ಆಲೂಗಡ್ಡೆ ರಸ ಹಚ್ಚುವ ಮೂಲಕ ಚರ್ಮಕ್ಕೆ ತೇವಾಂಶ ತುಂಬಬಹುದಾಗಿದೆ.

ಬಾದಾಮಿ ಎಣ್ಣೆ ಹಾಗೂ ವಿಟಮಿನ್ ಇ ಬಳಕೆಯಿಂದ ಕಣ್ಣುಗಳ ಸುತ್ತಲಿನ ಕಪ್ಪುಗಟ್ಟುವಿಕೆಯು ಕಾಲಾಂತರದಲ್ಲಿ ಇಲ್ಲದಂತಾಗಲಿದೆ. ನೀವು ನಿದ್ರೆಗೆ ಹೋಗುವ ಮುನ್ನ ಈ ಮಿಶ್ರಣವನ್ನು ಕಣ್ಣುಗಳ ಕೆಳಗೆ ಮಸಾಜ್ ಮಾಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read