ಇಲ್ಲಿದೆ ಗುಂಗುರು ಕೂದಲಿನ ನಿರ್ವಹಣೆಗೆ ಟಿಪ್ಸ್

ಕೆಲವರು ತಮಗೆ ಗುಂಗುರು ಕೂದಲು ಇಲ್ಲವಲ್ಲ ಎಂದು ಬೇಸರಿಸುತ್ತಾರೆ. ಕೃತಕವಾಗಿ ಕೂದಲನ್ನು ಗುಂಗುರು ಮಾಡಿಕೊಳ್ಳುತ್ತಾರೆ. ಆದರೆ ಗುಂಗುರು ಕೂದಲುಳ್ಳವರು ಅದನ್ನು ನಿರ್ವಹಿಸಲು ಪರದಾಡುತ್ತಾರೆ. ಗುಂಗುರು ಕೂದಲಿರುವವರಿಗೆ ಸ್ಟ್ರೈಟ್ನಿಂಗ್‌ ಮಾಡಬೇಕೆನಿಸುತ್ತದೆ. ನೇರ ಕೂದಲಿರುವವರಿಗೆ ಗುಂಗುರು ಟ್ರೆಂಡ್ ಅನಿಸುತ್ತದೆ.

ನಿಮ್ಮದು ಗುಂಗುರು ಕೂದಲೇ? ಈ ಸುಲಭ ಟಿಪ್ಸ್‌ಗಳ ಮೂಲಕ ನಿಮ್ಮ ಕೂದಲನ್ನು ನಿರ್ವಹಿಸಿ.

ಶಾಂಪೂ ಆಯ್ಕೆ

ಕೂದಲನ್ನು ಹಾನಿಗೊಳಿಸದ, ಸಲ್ಫೇಟ್ ಮುಕ್ತ ಶ್ಯಾಂಪೂಗಳನ್ನು ಆರಿಸಿಕೊಳ್ಳಿ. ಗ್ಲಿಸರಿನ್ ಯುಕ್ತ ಶಾಂಪೂ ಇನ್ನು ಉತ್ತಮ.

ಕಂಡೀಷನರ್‌ ತಪ್ಪಿಸಬೇಡಿ

ಗುಂಗುರು ಕೂದಲಾಗಿದ್ದರೆ ಶಾಂಪೂ ಹಾಕಿ ಕೂದಲನ್ನು ತೊಳೆದ ಬಳಿಕ ಕಂಡಿಷನರ್ ಹಾಕುವುದನ್ನು ಎಂದಿಗೂ ಮರೆಯಬೇಡಿ.

ಪ್ರತಿದಿನ ಶಾಂಪೂ ಬಳಸಬೇಡಿ

ಗುಂಗುರು ಕೂದಲಿಗೆ ಪ್ರತಿದಿನ ಶಾಂಪೂ ಬಳಸುವುದು ಒಳ್ಳೆಯದಲ್ಲ. ಆದರೆ ಎರಡು ದಿನಕ್ಕೊಮ್ಮೆ ಕಂಡಿಷನರ್ ಬಳಸಬಹುದು.

ಡೀಪ್ ಕಂಡಿಷನಿಂಗ್
ಸಾಧ್ಯವಾದರೆ ವಾರಕ್ಕೊಮ್ಮೆ ಡೀಪ್ ಕಂಡಿಷನಿಂಗ್ ಮಾಡಿಕೊಳ್ಳಿ. ಇದು ಕೂದಲನ್ನು ನುಣುಪಾಗಿಸಿ ಹೈಡ್ರೇಟ್ ಅನ್ನಾಗಿಸುತ್ತದೆ.

ಗಾಳಿಯಲ್ಲಿಯೇ ಒಣಗಲು ಬಿಡಿ

ಡ್ರೈಯರ್ ಬಳಸಿ ಕೂದಲು ಒಣಗಿಸುವ ಬದಲು ಗಾಳಿಯಲ್ಲಿಯೇ ಒಣಗಲು ಬಿಡಿ. ಇದು ಕೂದಲಿಗೆ ಒಳ್ಳೆಯದು ಮತ್ತು ಗಂಟು ಆಗುವುದಿಲ್ಲ. ಟವೆಲ್ ನಿಂದ ಸರಿಯಾಗಿ ಒರೆಸಿಕೊಂಡು ಬಳಿಕ ಗಾಳಿಯಲ್ಲಿ ಆರಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read