ʼಗ್ಲಾಸ್ ಸ್ಕಿನ್ʼ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಖ ಗ್ಲಾಸ್ ರೀತಿ ಫಳ ಫಳ ಹೊಳೆಯಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವರ ಮುಖ ತುಂಬಾ ಕಲೆ, ಚುಕ್ಕಿಗಳು ಇರುತ್ತದೆ. ಇನ್ನು ಕೆಲವರಿಗೆ ಏನೇ ಮಾಡಿದರೂ ಮುಖದ ಕಾಂತಿ ಹೆಚ್ಚುತ್ತಿಲ್ಲ ಎಂಬ ಚಿಂತೆ ಕಾಡುತ್ತಿರುತ್ತದೆ. ಅಂತವರು ಒಮ್ಮೆ ಈ ಟಿಪ್ಸ್ ಟ್ರೈ ಮಾಡಿ ನೋಡಿ. ಮುಖದ ಕಾಂತಿ ಹೆಚ್ಚಾಗುವುದರ ಜತೆಗೆ ಡೆಡ್ ಸ್ಕಿನ್ ಗಳು ನಿವಾರಣೆಯಾಗುತ್ತದೆ.

ಮೊದಲಿಗೆ ಒಂದು ಬೌಲ್ ಗೆ 1 ಚಮಚ ಅಕ್ಕಿ ಹಿಟ್ಟು ಹಾಕಿ. ಅದಕ್ಕೆ 1 ಚಮಚ ಲಿಂಬೆ ಹಣ್ಣಿನ ರಸ ಹಾಕಿ ನಂತರ ಅದಕ್ಕೆ 1 ಚಮಚ ಹಸಿ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ. ನಿಮ್ಮ ಮುಖವನ್ನು ಮೊದಲು ಕ್ಲೀನ್ ಆಗಿ ತೊಳೆದುಕೊಳ್ಳಿ. ನಂತರ ಈ ಮಿಶ್ರಣವನ್ನು ಮುಖವಿಡೀ ಹಚ್ಚಿಕೊಂಡು ಚೆನ್ನಾಗಿ ವರ್ತುಲಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ನಂತರ ನೀರಿನಿಂದ ಮುಖ ತೊಳೆಯಿರಿ.

ಅಕ್ಕಿ ಹಿಟ್ಟಿನಿಂದ ಸ್ಕ್ರಬ್ ಮಾಡಿಕೊಂಡ ನಂತರ ಒಂದು ಬೇಯಿಸಿದ ಆಲೂಗಡ್ಡೆ ತೆಗೆದುಕೊಂಡು ಚೆನ್ನಾಗಿ ಹಿಸುಕಿಕೊಳ್ಳಿ. ಇದಕ್ಕೆ 1 ಚಮಚ ಮೊಸರು, 1 ಟೀ ಸ್ಪೂನ್ ಅರಿಶಿನ, 1 ಟೀ ಸ್ಪೂನ್-ಲಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಬಿಡಿ. ನಂತರ ಮುಖ ತೊಳೆದು ಯಾವುದಾದರೂ ಒಂದು ಒಳ್ಳೆಯ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ವಾರದಲ್ಲಿ 3 ದಿನ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read