ಕೂಡು ‌ʼಕುಟುಂಬʼದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮನೆ ಎಂದ ಮೇಲೆ ಅಲ್ಲಿ ಸಣ್ಣ, ಪುಟ್ಟ ಜಗಳ, ಮನಸ್ತಾಪಗಳು ಸಹಜ. ಅದು ಗಂಡ – ಹೆಂಡತಿ, ಅತ್ತೆ – ಸೊಸೆಯರಲ್ಲಿ ಈ ಮನಸ್ತಾಪಗಳು ಹೆಚ್ಚು. ಕೆಲವೊಂದನ್ನು ನಿವಾರಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ.

ನಮ್ಮ ನಮ್ಮ ಅಭಿಪ್ರಾಯಗಳು ಭಿನ್ನವಾಗಿರುವಾಗ ಸಹಜವಾಗಿ ಅಲ್ಲಿ ಜಗಳ, ಸಿಟ್ಟು, ಗಲಾಟೆಗಳು ನಡೆಯುತ್ತದೆ. ಮೊದಲು ಸಮಾಧಾನವಾಗಿ ಕುಳಿತುಕೊಂಡು ಮಾತನಾಡಿ. ‘ನಾನು ಇರುವುದು ಹೀಗೆ’ ಅನ್ನುವುದನ್ನು ಸಿಟ್ಟಿನ ಭರದಲ್ಲಿಯೇ ಅವರಿಗೆ ತಿಳಿಸಿ ಹೇಳುವ ಬದಲು ಅವರಿಗೆ ನಿಮ್ಮ ಮನಸ್ಥಿತಿಯನ್ನು ತಿಳಿಸಿ ಹೇಳಿ.

ಇನ್ನು ಅತ್ತೆನೋ, ಗಂಡನೋ ಅವರ ಇಷ್ಟ ಕಷ್ಟದ ಬಗ್ಗೆ ಹೇಳುವಾಗ ನೀವು ಸಮಾಧಾನವಾಗಿ ಕೇಳಿಸಿಕೊಳ್ಳಿ. ಆಗ ಅರ್ಧದಷ್ಟು ಸಮಸ್ಯೆಗಳು ನಿವಾರಣೆಯಾಗುತ್ತದೆ. ನಿಮಗೂ ಅವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ.

ನಿಮಗೆ ಸುಸ್ತಾದಾಗ ಅದನ್ನು ಅವರಿಗೆ ತಿಳಿಸಿ. ಹಾಗೇ ಮೃದು ಮಾತಿನಿಂದ ಅವರ ಮನವೊಲಿಸಿಕೊಂಡು ಸಹಾಯ ಕೇಳಿ.

ಇನ್ನು ಮನೆಯವರೆಲ್ಲಾ ಸೇರಿಕೊಂಡು ಅಡುಗೆ ಮಾಡುವುದು, ಕೆಲಸವನ್ನು ಹಂಚಿಕೊಳ್ಳುವುದು, ಹತ್ತಿರ ಇರುವ ಯಾವುದಾದರು ಜಾಗಕ್ಕೆ ಹೋಗಿ ಬರುವುದು ಮಾಡಿ ಇದರಿಂದ ಮನಸ್ಸಿಗೆ ಕೂಡ ರಿಲ್ಯಾಕ್ಸ್ ಆಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read