ಮುಖದ‌ ಮೇಲಿನ ಮೊಡವೆ ಕಲೆ ಮತ್ತು ರಂಧ್ರ ನಿವಾರಣೆ ಮಾಡಲು ಇಲ್ಲಿದೆ ʼಟಿಪ್ಸ್ʼ

ಮೊಡವೆ ಕಲೆಗಳು ಹಾಗೂ ಮೊಡವೆ ರಂಧ್ರಗಳನ್ನು ನಿವಾರಿಸುವ ಮನೆಮದ್ದು ಇಲ್ಲಿದೆ. ಒಂದು ಬಟ್ಟಲಿಗೆ ಒಂದು ಚಮಚ ಲೋಳೆರಸವನ್ನು ಹಾಕಿ, 1 ಚಮಚ ಗುಲಾಬಿ ಜಲವನ್ನು ಹಾಕಿ, 1 ಚಮಚ ತೆಂಗಿನಕಾಯಿ ನೀರನ್ನು ಹಾಕಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಂಡು ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಇದನ್ನು ರಾತ್ರಿ ಪೂರ್ತಿ ಹಾಗೇ ಒಣಗಲು ಬಿಡಿ. ಬೆಳಿಗ್ಗೆ ಮುಖವನ್ನು ತೊಳೆಯಿರಿ.

ಇದರಿಂದ ಮುಖದಲ್ಲಿರುವ ಮೊಡವೆಯ ಕಲೆಗಳು ಮತ್ತು ರಂಧ್ರಗಳು ಮಾಯವಾಗುತ್ತದೆ. ಇದನ್ನು ಒಂದು ತಿಂಗಳ ಕಾಲ ನಿರಂತರವಾಗಿ ಬಳಸಿ. ನಿಮ್ಮ ಮುಖದಲ್ಲಿ ಬದಲಾವಣೆ ನಿಮಗೇ ಗೊತ್ತಾಗುತ್ತದೆ.

ಲೋಳೆರಸದಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಇ ಇದೆ. ಎಲ್ಲಾ ರೀತಿಯ ಚರ್ಮದ ತೊಂದರೆಗಳನ್ನು ಸರಿಪಡಿಸುವಂತಹ ಶಕ್ತಿ ಇದಕ್ಕಿದೆ. ಗುಲಾಬಿ ನೀರಿನಲ್ಲಿ ಹೇರಳವಾದ ಔಷಧೀಯ ಗುಣ ಹಾಗೂ ಕಲೆಗಳನ್ನು ಹೋಗಲಾಡಿಸುವ ಶಕ್ತಿ ಇದೆ. ಮುಖಕ್ಕೆ ಒಳ್ಳೆಯ ಕಾಂತಿಯನ್ನು ಕೊಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read