ಇಲ್ಲಿದೆ ‘ಆರೋಗ್ಯ’ಕರವಾಗಿ ಅಡುಗೆ ಮಾಡುವ ಟಿಪ್ಸ್

ಅಡುಗೆ ಕೇವಲ ರುಚಿಯಾಗಿದ್ದರೆ ಸಾಲದು, ಆರೋಗ್ಯಕರವಾಗಿಯೂ ಇದ್ದರೆ ಅದನ್ನು ಸವಿಯುವ ಮಜವೇ ಬೇರೆ. ತರಕಾರಿಗಳಲ್ಲಿನ ಪೋಷಕಾಂಶಗಳನ್ನು ಹಾಗೇ ಉಳಿಸಿ ಆರೋಗ್ಯಕರವಾಗಿ ಹೇಗೆ ಅಡುಗೆ ಮಾಡಬೇಕು ಅಂತ ತಿಳಿಯಿರಿ.
ಆಲೂಗಡ್ಡೆ

ಸಣ್ಣ ಸಣ್ಣ ತುಂಡಾಗಿ ಕತ್ತರಿಸಿ ಆಲೂಗಡ್ಡೆಯನ್ನು ಬೇಯಿಸಬೇಡಿ. ಹಾಗೆ ಮಾಡಿದರೆ ಅವುಗಳಲ್ಲಿ ಪೋಷಕಾಂಶಗಳು ಹೋಗುತ್ತವೆ. ಅದಕ್ಕಾಗಿ ಆಲೂಗಡ್ಡೆಯನ್ನು ಮಧ್ಯದಲ್ಲಿ ಕತ್ತರಿಸಿ ಸಿಪ್ಪೆ ಸಮೇತ ಬೇಯಿಸಬೇಕು. ಹೀಗೆ ಮಾಡುವುದರಿಂದ ಆಲೂಗಡ್ಡೆ ಸಿಪ್ಪೆಯಲ್ಲಿರುವ ನಾರಿನಾಂಶ ಹೋಗದು. ಇತರೆ ಪೋಷಕಾಂಶಗಳು ಹಾಗೆ ಉಳಿಯುತ್ತವೆ.

ಕ್ಯಾಬೇಜ್

ಬಹಳ ಜನ ಕ್ಯಾಬೇಜನ್ನು ಬೇಯಿಸಿ ಅಡುಗೆ ಮಾಡುತ್ತಾರೆ. ಹೀಗೆ ಬೇಯಿಸಿದಾಗ ದೇಹಕ್ಕೆ ಒಳ್ಳೆಯದು ಮಾಡುವ ಗುಣಗಳು ನಶಿಸುತ್ತವೆ. ಅದಕ್ಕೆ ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಬೇಕು. ಆಗ ಪೋಷಕಾಂಶಗಳು ಹೋಗದು. ಕ್ಯಾಬೇಜ್ ಅನ್ನು ಅತಿಯಾಗಿ ಬೇಯಿಸಿದರೂ ಸಲ್ಫರ್ ಬಿಡುಗಡೆಯಾಗಿ ರುಚಿ ಬದಲಾಗುವ ಸಾಧ್ಯತೆ ಹೆಚ್ಚು.

ಈರುಳ್ಳಿ

ಸಲಾಡ್, ಬರ್ಗರ್, ಸ್ಯಾಂಡ್ವಿಚ್ ಅಂತಹುಗಳಲ್ಲಿ ಹಸಿ ಈರುಳ್ಳಿ ಹಾಕಿರುತ್ತಾರೆ. ಇದು ಒಳ್ಳೆಯದಲ್ಲ ಹಸಿ ಈರುಳ್ಳಿಯಲ್ಲಿ ಸಲ್ಫರ್ ಇರುತ್ತದೆ. ಇದು ಜೀರ್ಣಕ್ರಿಯೆ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಸಿ ಈರುಳ್ಳಿ ಒಳ್ಳೆಯದಲ್ಲ.

ಮಾಂಸ-ಮೀನು

ಇವುಗಳನ್ನು ಹೆಚ್ಚಿನ ಉರಿಯಲ್ಲಿ ಬೇಯಿಸಿದರೆ ವಿಟಮಿನ್ ಹೋಗುತ್ತದೆ. ಆರೋಗ್ಯಕ್ಕೆ ಹಾನಿ ಮಾಡುವ ಕಾರ್ಸಿನೋಜೆನಿಕ್ ಕಾಂಪೌಂಡ್ ಬಿಡುಗಡೆಯಾಗುತ್ತವೆ. ಹೀಗಾಗಿ ಕಡಿಮೆ ಉರಿಯಲ್ಲಿ ಇವುಗಳನ್ನು ಬೇಯಿಸಿದರೆ ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read