ಇಲ್ಲಿದೆ ಪಿಂಪಲ್ ನಿವಾರಣೆಗೊಂದು ಸಿಂಪಲ್ ʼಟಿಪ್ಸ್ʼ

ಮುಖದಲ್ಲಿ ಮೊಡವೆ ಕಾಣಿಸಿಕೊಂಡರೆ ಅದರಷ್ಟು ದೊಡ್ಡ ತಲೆನೋವು ಯಾವುದು ಇಲ್ಲ. ಮೊಡವೆ ಒಣಗಿದರೂ ಅದರ ಕಲೆ ಮುಖದಿಂದ ಹೋಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದು ಅಲ್ಲದೇ ಕೆಲವೊಮ್ಮೆ ಈ ಮೊಡವೆಗಳಲ್ಲಿ ಕೀವು ಕೂಡ ಕಾಣಿಸಿಕೊಂಡು ಮುಖವನ್ನು ಮತ್ತಷ್ಟು ಅಸಹ್ಯವಾಗಿಸುತ್ತದೆ.

ಇದಕ್ಕೆ ಒಂದು ಸಿಂಪಲ್ ಆದ ಮನೆ ಮದ್ದು ಇಲ್ಲಿದೆ. ನಿಮ್ಮ ಮುಖಕ್ಕೆ ಸರಿಹೊಂದುವಂತಿದ್ದರೆ ಒಮ್ಮೆ ಮಾಡಿ ನೋಡಿ.

ಏಳರಿಂದ ಎಂಟು ತುಳಸಿ ಎಲೆ, ಎರಡು ದಂಟು ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಕಲ್ಲಿನಿಂದ ಚೆನ್ನಾಗಿ ಜಜ್ಜಿಕೊಳ್ಳಿ. ನಂತರ ಇದನ್ನು ಒಂದು ಚಿಕ್ಕ ತಟ್ಟೆಗೆ ತೆಗೆದುಕೊಂಡು ಇದಕ್ಕೆ ಒಂದು ಟೀ ಚಮಚ ಅಲೋವೇರಾ ಜೆಲ್, ಒಂದು ಚಿಟಿಕೆ ಕಸ್ತೂರಿ ಅರಿಶಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ.

ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಂಡು ಒರೆಸಿಕೊಳ್ಳಿ. ನಂತರ ಈ ಮಿಶ್ರಣವನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ. ಕೆಲವೇ ದಿನಗಳಲ್ಲಿ ಮುಖದಲ್ಲಿರುವ ಮೊಡವೆ ನಿಧಾನಕ್ಕೆ ಕಡಿಮೆಯಾಗುತ್ತದೆ. ಚೆನ್ನಾಗಿ ನೀರು ಕುಡಿಯುವುದನ್ನು ಮರೆಯಬೇಡಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read