ಡ್ರೈ ಸ್ಕಿನ್ ನಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಬೆಳ್ಳಗಿನ ಹೊಳೆಯವ ಚರ್ಮ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟ. ಮುಖ ಒಣಗಿ ಕಾಂತಿ ಕಳೆದುಕೊಳ್ಳುತ್ತೆ . ಚರ್ಮ ಒಣಗುವ ಮುನ್ನ ಕಾಳಜಿ ತೆಗೆದುಕೊಳ್ಳುವುದು ಉತ್ತಮ.

ಒಣ ಚರ್ಮ ಸಮಸ್ಯೆ ನಿವಾರಣಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬ್ಯೂಟಿ ಪ್ರಾಡಕ್ಟ್ ಗಳಿವೆ. ಆದ್ರೆ ಅವುಗಳ ಬಳಕೆಯಿಂದ ಅಡ್ಡ ಪರಿಣಾಮದ ಅಪಾಯ ಕಾಡುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಮುಖದ ಆರೋಗ್ಯವನ್ನು ಕಾಪಾಡಿಕೊಂಡು, ಸೌಂದರ್ಯವನ್ನು  ಹೆಚ್ಚಿಸಲು ಕೆಲವು ಸರಳ ನೈಸರ್ಗಿಕ ಉಪಾಯಗಳು ಇಲ್ಲಿವೆ.

ಜೇನುತುಪ್ಪ ಆರೋಗ್ಯಕ್ಕೊಂದೇ ಅಲ್ಲ ತ್ವಚೆಗೆ ಉತ್ತಮ. ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಇರುವ ಪದಾರ್ಥ ಇದು. ಜೇನುತುಪ್ಪವನ್ನು ಮುಖದ ಮೇಲೆ ಹಚ್ಚಿ ನಿಧಾನವಾಗಿ ಸ್ಕ್ರಬ್ ಮಾಡಬೇಕು. ಹತ್ತು ನಿಮಿಷದ ನಂತರ ಮುಖವನ್ನು ನೀರಿನಲ್ಲಿ ತೊಳೆಯಬೇಕು. ಇದು ಮುಖದ ಕಾಂತಿ ಹೆಚ್ಚಿಸುವ ಜೊತೆಗೆ ಒಣ ಚರ್ಮ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಹಾಲು ಮತ್ತು ಆಲಿವ್ ಆಯಿಲ್ ಕೂಡ ಚರ್ಮದ ಕಾಂತಿ ಹೆಚ್ಚಿಸುತ್ತವೆ. ತಂಪಾದ ಹಾಲಿನಲ್ಲಿ ಆಲಿವ್ ಆಯಿಲ್ ನ 2 ಹನಿ ಹಾಕಿ ಅದನ್ನು ಮುಖಕ್ಕೆ ಮಸಾಜ್ ಮಾಡುವ ಮೂಲಕ ಒಣ ಚರ್ಮದಿಂದ ಪರಿಹಾರ ಹೊಂದಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read