‘ಎಣ್ಣೆ ತ್ವಚೆ’ ಹೋಗಲಾಡಿಸಲು ಇಲ್ಲಿವೆ ಮನೆ ಮದ್ದು

 

ಎಣ್ಣೆ ತ್ವಚೆ ಅಥವಾ ಆಯಿಲ್‌ ಸ್ಕಿನ್‌ ಇರುವವರು ಮುಖದ ಆರೈಕೆ ಕಡೆ ಗಮನ ಕೊಡದಿದ್ದರೆ ಮುಖ ಮಂಕಾಗಿ ಕಾಣುವುದು. ಮುಖ ಕಳೆ-ಕಳೆಯಾಗಿ ಕಾಣಲು ಈ ಬ್ಯೂಟಿ ಟಿಪ್ಸ್ ಪಾಲಿಸಿದರೆ ಒಳ್ಳೆಯದು.

* ದಿನದಲ್ಲಿ ಎರಡು ಬಾರಿ ಮುಖ ತೊಳೆಯಬೇಕು. ಹೆಚ್ಚು ರಾಸಾಯನಿಕ ಇರುವ ಸೋಪು ಬದಲು ಕಡಲೆ ಹಿಟ್ಟು ಮುಂತಾದ ನೈಸರ್ಗಿಕ ವಸ್ತುಗಳಿಂದ ಮುಖದ ಆರೈಕೆ ಮಾಡುವುದು ಒಳ್ಳೆಯದು.

* ಮುಖದಲ್ಲಿ ಜಿಡ್ಡಿನಂಶ ಅಧಿಕವಿದ್ದರೆ ಬ್ಲೋಟಿಂಗ್‌ ಪೇಪರ್‌ ಬಳಸಿ ಒರೆಸಬೇಕು. ಹೀಗೆ ಮಾಡುವುದರಿಂದ ಮುಖ ಫ್ರೆಶ್‌ ಆಗಿ ಕಾಣುವುದು.

* ಮುಖಕ್ಕೆ ಜೇನು ತುಪ್ಪ ಹಚ್ಚಿ, ನಂತರ ಮುಖ ತೊಳೆದರೆ ಮುಖದ ಹೊಳಪು ಹೆಚ್ಚುವುದು.

* ವಾರಕ್ಕೊಮ್ಮೆ ಮೊಟ್ಟೆಯ ಬಿಳಿಯನ್ನು ಮುಖಕ್ಕೆ ಹಚ್ಚಿ, ಅದು ಒಣಗಿದ ಮೇಲೆ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ಮುಖ ಫ್ರೆಶ್ ಆಗಿ ಕಾಣುವುದು.

* ಮೊಟ್ಟೆಯ ಬಿಳಿ ಬಾಗಕ್ಕೆ ನಿಂಬೆರಸ ಮಿಕ್ಸ್ ಮಾಡಿ ಹಚ್ಚಿದರೆ ಮೊಡವೆ ಸಮಸ್ಯೆಯೂ ಕಡಿಮೆಯಾಗುತ್ತದೆ.

* ಬಾದಾಮಿಯನ್ನು ತರಿತರಿಯಾಗಿ ಪುಡಿ ಮಾಡಿ, ಅದಕ್ಕೆ ಜೇನು ತುಪ್ಪ ಮಿಕ್ಸ್ ಮಾಡಿ ಸ್ಕ್ರಬ್ ರೀತಿ ಬಳಸಬಹುದು.

* ಕ್ರೀಮ್ ರೀತಿಯ ಮೇಕಪ್ ವಸ್ತುಗಳ ಬದಲು ಆಯಿಲ್‌ ಫ್ರೀ ಅಥವಾ ಪೌಡರ್‌ ರೀತಿಯ ಮೇಕಪ್‌ ಬಳಸುವುದು ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read