ದಟ್ಟವಾದ ಕೂದಲು ಬೆಳೆಸಲು ಇಲ್ಲಿದೆ ಈಸಿ ಟಿಪ್ಸ್

ಒತ್ತಡದ ಜೀವನದಲ್ಲಿ ಯಾವುದಕ್ಕೂ ಸರಿಯಾಗಿ ಸಮಯ ಸಿಗುವುದಿಲ್ಲ. ಆರೋಗ್ಯ, ಸೌಂದರ್ಯ, ಕೂದಲು ಆರೈಕೆಯನ್ನು ಕೂಡ ಸರಿಯಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಆಹಾರ, ಜೀವನ ಶೈಲಿಯಿಂದಾಗಿ ಕೂದಲು ಉದುರಲು ಶುರುವಾಗುತ್ತದೆ.

ಕೂದಲು ಉದುರುವ ಸಮಸ್ಯೆ ತಡೆಗೆ ಮಾರುಕಟ್ಟೆಯಲ್ಲಿ ಅನೇಕ ಉತ್ಪನ್ನಗಳಿವೆ. ಅವುಗಳಲ್ಲಿ ಯಾವುದು ಸೂಕ್ತ ಎಂಬ ಆಯ್ಕೆಯೇ ಕಷ್ಟವಾಗುತ್ತದೆ. ಆದ್ರೆ ಈಗ ನಾವು ಹೇಳುವ ವಿಧಾನ ಬಳಸಿದ್ರೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ಕೂದಲನ್ನು ಉದ್ದವಾಗಿ ಹಾಗೂ ದಟ್ಟವಾಗಿ ಬೆಳೆಸಬಹುದು.

ಸಾಮಾನ್ಯವಾಗಿ ಶುಷ್ಕ ಚರ್ಮವನ್ನು ಮೃದುಗೊಳಿಸಲು ವ್ಯಾಸಲೀನ್ ಬಳಸಲಾಗುತ್ತದೆ. ಆದ್ರೆ ಈ ವ್ಯಾಸಲೀನ್ ನಿಂದ ಇನ್ನೊಂದು ಬಹುದೊಡ್ಡ ಪ್ರಯೋಜನವಿದೆ. ಉದ್ದನೆ ದಟ್ಟ ಕೂದಲು ಬಯಸುವವರು ಈ ಮದ್ದನ್ನು ಮಾಡಬಹುದು. ಕೂದಲ ಬುಡ ಶುಷ್ಕವಾದಾಗ ಕೂದಲು ಉದುರಲು ಶುರುವಾಗುತ್ತದೆ. ಕೂದಲ ಬುಡಕ್ಕೆ ವ್ಯಾಸಲೀನ್ ಹಚ್ಚಿದಾಗ ಕೂದಲು ಮೃದುವಾಗಿ ಉದ್ದಗೆ ಬೆಳೆಯುತ್ತದೆ.

2 ಚಮಚ ವ್ಯಾಸಲೀನ್, ಒಂದು ಚಮಚ ತೆಂಗಿನ ಎಣ್ಣೆ ಹಾಗೂ 2 ವಿಟಮಿನ್ ಇ ಮಾತ್ರೆ‌, 2 ಚಮಚ ವ್ಯಾಸಲೀನ್ ಬಿಸಿ ಮಾಡಿ ಅದು ತಣ್ಣಗಾದ ಮೇಲೆ ಎಣ್ಣೆ, ಮಾತ್ರೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ರಾತ್ರಿ ಕೂದಲಿಗೆ ಹಚ್ಚಿ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆಯಿರಿ. ಇದು ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ನೆರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read