ಆಕರ್ಷಕ ಉಗುರಿಗೆ ಇಲ್ಲಿದೆ ಸುಲಭ ಟಿಪ್ಸ್

ನಾವು ಸುಂದರವಾಗಿ ಕಾಣಲು ದಿನವೂ ಹಲವು ಕಸರತ್ತುಗಳನ್ನು ಮಾಡುತ್ತೇವೆ. ಆದರೆ ಸುಂದರವಾಗಿ ಕಾಣಲು ಕೇವಲ ಮುಖ ಮಾತ್ರವಲ್ಲ, ದೇಹದ ಪ್ರತಿಯೊಂದು ಅಂಗವೂ ಆಕರ್ಷಕವಾಗಿರಬೇಕು. ಅದರಲ್ಲಿಯೂ ಉಗುರಿನ ಸ್ವಚ್ಚತೆ ಹಾಗೂ ಸುಂದರತೆ ಅತಿ ಮುಖ್ಯ. ಸುಂದರ ಉಗುರು ಆರೋಗ್ಯಕರ ಶರೀರದ ಸಂಕೇತ. ಹಾಗಾಗಿ ನಿಮ್ಮ ಉಗುರನ್ನು ಸುಂದರವಾಗಿಸಿಕೊಳ್ಳುವ ಟಿಪ್ಸ್ ಇಲ್ಲಿದೆ.

ಅತಿಯಾದ ಹಾಗೂ ಉದ್ದನೆಯ ಉಗುರು ಬಿಡುವುದರಿಂದ ಸ್ವಚ್ಚಗೊಳಿಸುವುದು ಕಷ್ಟ ಹಾಗೂ ದೇಹದ ಬೆಳವಣಿಗೆಯನ್ನೂ ಕುಂಠಿತಗೊಳಿಸುತ್ತದೆ. ಹಾಗಾಗಿ ಉಗುರು ಹೆಚ್ಚು ಬೆಳೆಯದಂತೆ ನೋಡಿಕೊಳ್ಳಿ.

ನೈಲ್ ಪಾಲಿಶ್ ತೆಗೆದ ಬಳಿಕ ತಪ್ಪದೆ ಕೈ ಮತ್ತು ಉಗುರಿಗೆ ಮಾಯಿಶ್ಚರೈಸರ್ ಕ್ರೀಮ್ ಲೇಪಿಸಿ ನಿಮ್ಮ ಕೈಗಳನ್ನು ಸ್ವಚ್ಚವಾಗಿ ತೊಳೆಯಿರಿ. ಉಗುರುಗಳಿಗೆ ಬಳಸುವ ಪಾಲೀಶ್ 3 ರಿಂದ 5 ಕ್ಕಿಂತ ಹೆಚ್ಚು ಬಾರಿ ಲೇಪಿಸಿದರೆ ಅಸಹ್ಯವೆನಿಸುತ್ತದೆ. ಹಾಗಾಗಿ ಆ ಬಗೆಗೆ ಹೆಚ್ಚಿನ ಲಕ್ಷ್ಯ ಇರಲಿ.

ಒಂದು ಸರಳ ಪ್ಯಾಕ್ ಹಾಕುವುದರ ಮುಖೇನ ಚರ್ಮದಲ್ಲಿ ಅಡಗಿರುವ ಸತ್ತ ಕಣಗಳು ಹೊರ ಬಂದು ಚರ್ಮವು ಮೃದುವಾಗುವಂತೆ ನೋಡಿಕೊಳ್ಳಿ. ಅಲ್ಲದೇ ಪೆಡಿಕ್ಯೂರ್, ಮ್ಯಾನಿಕ್ಯೂರ್ ಸೆಟ್ ಮನೆಯಲ್ಲಿ ತಂದಿಟ್ಟುಕೊಂಡು ಅದನ್ನೇ ಸಾಧ್ಯವಾದಷ್ಟು ಬಳಸಿ.

ನೀವು ಬಳಸುವ ಉಪಕರಣಗಳು ಸದಾ ಸ್ವಚ್ಛವಾಗಿರುವಂತೆ ಗಮನ ಹರಿಸಿ. ಅಲ್ಲದೆ ಕೊಳೆಯಿಂದ ದೂರವಿರಿ ಮಾತ್ರವಲ್ಲ. ಎಣ್ಣೆ, ಜಿಡ್ಡಿನ ಪದಾರ್ಥವನ್ನು ಬಳಸಿದ ಬಳಿಕ ಕೈಗಳನ್ನು ಸೋಪಿನಿಂದ ಸ್ವಚ್ಚವಾಗಿ ತೊಳೆದುಕೊಳ್ಳಿ. ಇದರಿಂದ ನಿಮ್ಮ ಕೈಗಳು ಹಾಗೂ ಉಗುರುಗಳು ಸುಂದರವಾಗಿಯೂ ಆಕರ್ಷಕವಾಗಿಯೂ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read