ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಆಹಾರ ಮರಾಟ; ಪ್ರಶ್ನಿಸಿದಕ್ಕೆ ಪ್ರಯಾಣಿಕನ ಮೇಲೆ ರೈಲ್ವೆ ಕ್ಯಾಟರಿಂಗ್ ಸಿಬ್ಬಂದಿ ಹಲ್ಲೆ

ನವದೆಹಲಿ: ರೈಲಿನಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಆಹಾರ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಪ್ರಯಾಣಿಕರೊಬ್ಬರ ಮೇಲೆ ರೈಲ್ವೆ ಕ್ಯಾಟರಿಂಗ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಹೇಮಕುಂಡ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಆಹಾರವನ್ನು ರೈಲಿನಲ್ಲಿ ಮಾರಾಟ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಪ್ರಯಾಣಿಕ ವಿಡಿಯೋ ಮಾಡುತ್ತಿದ್ದರು. ಇದಕ್ಕೆ ರೈಲ್ವೆ ಕ್ಯಾಟರಿಂಗ್ ಸಿಬ್ಬಂದಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

26 ವರ್ಷದ ಬಿಲ್ವಾನ್ ದಾಸ್ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ರೈಲಿನಲ್ಲಿ ತಮಗಾದ ಕಹಿ ಅನುಭವವನ್ನು ಹೇಳಿದ್ದಾರೆ. ಅಲ್ಲದೇ ರೈಲಿನಲ್ಲಿ ಎಂಆರ್ ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಆಹಾರ ಮಾರುತ್ತಿದ್ದರು ಎಂಬುದನ್ನು ವಿಡಿಯೋ ಶೇರ್ ಮಾಡಿದ್ದಾರೆ.

ಋಷಿಕೇಶದಲ್ಲಿ ಏ.6ರಂದು ಸಂಜೆ 5 ಗಂಟೆಗೆ ಹೇಮಕುಂಡ್ ಎಕ್ಸ್ ಪ್ರೆಸ್ ರಲಿನಲ್ಲಿ ಕೆಟರಿಂಗ್ ಸಿಬ್ಬಂದಿ 15 ರೂ. ನ್ರಿನ ಬಾಟಲ್ ಗಳನ್ನು 20 ರೂ.ಗೆ ಮಾರುತ್ತಿದ್ದರು. ಅದು ಸ್ಥಳಿಯ ಬ್ರ್ಯಾಂಡ್ ನೀರಿನ ಬಾಟಲಿ. ಅದರ ಜೊತೆಗೆ ನೂಡಲ್ಸ್, ಕಾಫಿ ಸೇರಿದಂತೆ ಇತರ ತಿಮ್ಡಿಯನ್ನು ಖರೀದಿಸಿದ್ದೆ. ಬಿಲ್ ಕೇಳಿದರೆ ಕೊಡಲು ನಿರಾಕರಿಸಿದ್ದಾರೆ. ಇದೆಲ್ಲವನ್ನೂ ನನ್ನ ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿದು 139 ಸಹಾಯವಾಣಿಗೆ ದೂರು ನೀಡಿದ್ದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅಲ್ಲಿಂದ ಸಂದೇಶ ಬಂದಿತ್ತು. ಆದರೆ ರಾತ್ರಿ 9ಗಂಟೆ ಸುಮಾರಿಗೆ ಕ್ಯಾಟರಿಂಗ್ ಸಿಬ್ಬಂದಿ ರೈಲಿನ ಆಹಾರ ಸಂಗ್ರಹಿಸುವ ಜಾಗಕ್ಕೆ ಬರುವಂತೆ ಕರೆದಿದ್ದಾರೆ. ನಾನು ಹೋಗಿಲ್ಲ. ಬೆಳಿಗ್ಗೆ ಬಂದು ಬಲವಂತವಾಗಿ ನನ್ನ ಎಬ್ಬಿಸಲು ಯತ್ನಿಸಿದ್ದಾರೆ. ನಾನು ಏಳದ ಕಾರಣ ಇಬ್ಬರು ಸಿಬ್ಬಂದಿ ಮೇಲೆ ಹತ್ತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ 15 ನಿಮಿಷ ಕಾಲ ನನ್ನನ್ನು ಬೆದರಿಸಿದ್ದಾರೆ. ಸಿಬ್ಬಂದಿ ನನ್ನ 70ಸಾವಿರ ರೂ ಮೌಲ್ಯದ ಕ್ಯಾಮರಾವನ್ನು ಕದ್ದೊಯ್ದಿದ್ದಾರೆ ಎಂದು ದೂರಿದ್ದರಎ. ಈ ಬಗ್ಗೆ ಕಥುವಾದಲ್ಲಿ ಇಳಿದು ದೂರು ನೀಡಿದ್ದೇನೆ. 139 ಸಹಾಯವಾಣಿಗೂ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಕ್ಯಾಟರಿಂಗ್ ಸಿಬ್ಬಂದಿಗಳ ವಿಡಿಯೋ ವೈರಲ್ ಆಗುತ್ತಿದ್ದಂತೆ ರೈಲ್ವೆ ಸಚಿವಾಲಯ ರಾಜಸ್ಥಾನ ಹೋಟೆಲ್ ಜೊತೆಗಿನ ರೈಲ್ವೆ ಕೆಟರಿಂಗ್ ಗುತ್ತಿಗೆಯನ್ನು ರದ್ದು ಮಾಡಿ, 5 ಲಕ್ಷ ದಂಡ ವಿಧಿಸಿದೆ. ಬಿಲ್ವಾನ್ ದಾಸ್ ಮೇಲೆ ಹಲ್ಲೆ ನಡೆಸಿದ ಸಿಬ್ಬಂದಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read