ಧಾರವಾಡ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳಿಗೆ ಹಾಗೂ ಸಾರ್ವಜನಿಕರಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹಾಗೂ ಸಮೀಕ್ಷೆ ಪೂರ್ಣಗೊಳಿಸಲು ಸಹಾಯವಾಗಲು ಅನುಕೂಲವಾಗುವಂತೆ ತಾಲ್ಲೂಕುವಾರು ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಸಮೀಕ್ಷೆಯಿಂದ ಹೊರಗುಳಿದ ಕುಟುಂಬಗಳು ತಮಗೆ ಸಂಬಂಧಿಸಿದ ತಾಲ್ಲೂಕಿನ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದಲ್ಲಿ, ತಕ್ಷಣವೇ ಗಣತಿದಾರರನ್ನು ತಮ್ಮ ಮನೆಗಳಿಗೆ ಸಮೀಕ್ಷೆ ಮಾಡಲು ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷಾ ಕಾರ್ಯದಲ್ಲಿ, ಸಮೀಕ್ಷೆಯ ವೆಬ್ ಸೈಟ್ https://kscbcselfdeclaratioin.karnataka.gov.in/ ಮೂಲಕ ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಕುಟುಂಬಗಳ ಸರ್ವೆ ಕಾರ್ಯದಲ್ಲಿ ಪಾಲ್ಗೊಳ್ಳಬಹುದು.
ಮತ್ತು ಸಾರ್ವಜನಿಕರು ಆನ್‍ಲೈನ್‍ನಲ್ಲಿ ಸುಲಭ ವಿಧಾನದಲ್ಲಿ ಸ್ವತಃ ನಿಮ್ಮ ಮೊಬೈಲ್‍ನಲ್ಲಿ ಅರ್ಜಿ ಭರ್ತಿ ಮಾಡಬಹುದು.
ಸಾರ್ವಜನಿಕರು https://kscbcselfdeclaratioin.karnataka.gov.in ವೆಬ್‍ಸೈಟಿಗೆ ಭೇಟಿ ನೀಡಿ, ನಾಗರಿಕ ಎಂದು ಆಯ್ಕೆ ಮಾಡಬೇಕು. ಮೊಬೈಲ್ ನಂಬರ್ ಹಾಕಿ ಓಟಿಪಿ ಪಡೆದು, ನಮೂದಿಸಬೇಕು. ತದನಂತರ ಹೊಸ ಸಮೀಕ್ಷೆ ಆರಂಭಿಸಿ ಎಂದು ಆಯ್ಕೆ ಮಾಡಿ ನಿಮಗೆ ಕೊಟ್ಟಿರುವ ಯುಎಚ್‍ಐಡಿ ಅನ್ನು ನಮೂದಿಸಿ ಪರಿಶೀಲನೆ ಮಾಡಿಕೊಂಡು ಸ್ವತಃ, ಸ್ವಯಂ ಪ್ರೇರಿತವಾಗಿ ಸಮೀಕ್ಷೆಯಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಸಹಾಯವಾಣಿ ಕೇಂದ್ರದಗಳುಜಿಲ್ಲಾ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 0836-2447961.,
ಧಾರವಾಡ ಶಹರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 0836-2213869., ಧಾರವಾಡ ಗ್ರಾಮೀಣ ಸಹಾಯವಾಣಿ ಕೇಂದ್ರದ ದೂರವಾಣಿಸಂಖ್ಯೆ:9482959895.,
ಹುಬ್ಬಳ್ಳಿ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 0836-2213889., ಹುಬ್ಬಳ್ಳಿ ಗ್ರಾಮೀಣ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: *8147656306.,ಕಲಘಟಗಿ ಸಹಾಯವಾಣಿ ಕೇಂದ್ರದ ದೂರವಾಣಿಸಂಖ್ಯೆ: 9449108069., ಕುಂದಗೋಳ ಸಹಾಯವಾಣಿ ಕೇಂದ್ರದ ದೂರವಾಣಿಸಂಖ್ಯೆ: 9980600193., ನವಲಗುಂದ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ:*9008869252.,*ಅಣ್ಣಿಗೇರಿ ಸಹಾಯವಾಣಿ ಕೇಂದ್ರದ ದೂರವಾಣಿಸಂಖ್ಯೆ: 9945151724.,
ಅಳ್ಳಾವರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ:*9008366469.,*ಗೆ ಕರೆ ಮಾಡಬಹುದು ಎಂದು ಜಿಲ್ಲಾ ಮಟ್ಟದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.