ವೈನ್ ಬಾಟಲಿಗಳನ್ನು ಕದ್ದ ಜೋಡಿ ಅಂದರ್

ಹೋಟೆಲ್ ಒಂದರ ರೆಸ್ಟೋರೆಂಟ್‌ನಲ್ಲಿ 1.6 ದಶಲಕ್ಷ ಯೂರೋಗಳಷ್ಟು ಬೆಲೆ ಬಾಳುವ 45 ವೈನ್ ಬಾಟಲಿಗಳನ್ನು ಕದ್ದ ಆರೋಪದಲ್ಲಿ ಸ್ಪಾನಿಶ್ ನ್ಯಾಯಾಲಯವೊಂದು ದಂಪತಿಗಳಿಬ್ಬರಿಗೆ ಜೈಲು ಶಿಕ್ಷೆ ನೀಡಿದೆ.

ಭಾರೀ ಯೋಜನೆಯೊಂದಿಗೆ ಈ ಕಳ್ಳತನ ಮಾಡಿದ ದಂಪತಿ, ತಮ್ಮ ಈ ಕೃತ್ಯಕ್ಕೂ ಮುನ್ನ ಮೂರು ಬಾರಿ ಹೋಟೆಲ್‌ಗೆ ಭೇಟಿ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

2021ರಲ್ಲಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ಕಳ್ಳತನವೊಂದರಲ್ಲಿ ಇದೇ ಜೋಡಿ ನೈಋತ್ಯ ಸ್ಪೇನ್‌ನ ಕಾಸೆರಸ್ ಪಟ್ಟಣದಲ್ಲಿರುವ ಏಟ್ರಿಯೋ ಹೋಟೆಲ್‌ನಲ್ಲಿ 350,000 ಯೂರೋ ಮೌಲ್ಯದ ಶಾಟೂ ಡಿ’ಕೆಮ್ 1806 ಈ ಜೋಡಿ ಕದ್ದಿದ್ದರು. ಈ ಸಂಬಂಧ ಪತ್ನಿಗೆ ನಾಲ್ಕು ವರ್ಷ ಹಾಗೂ ಪತಿಗೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆಯನ್ನು ಕಾಸೆರಸ್ ನ್ಯಾಯಾಲಯ ವಿಧಿಸಿದೆ. ಅಲ್ಲದೇ ಕ್ರೋವೇಷ್ಯಾದಲ್ಲಿ ಜುಲೈ 2022ರಲ್ಲಿ ಈ ಜೋಡಿಯನ್ನು ಬಂಧನದಲ್ಲಿರಿಸಲಾಗಿದ್ದ ಹೋಟೆಲ್‌ಗೆ 753,454 ಯೂರೋಗಳನ್ನು ಪರಿಹಾರದ ರೂಪದಲ್ಲಿ ಪಾವತಿ ಮಾಡುವಂತೆ ಜೋಡಿಗೆ ಕೋರ್ಟ್ ಸೂಚಿಸಿದೆ.

ಮಾಕ್ಸಿಕೋದ ಮಾಜಿ ಸುಂದರಿಯಾಗಿರುವ ಪತ್ನಿ ನಕಲಿ ಸ್ವಿಸ್ ಪಾಸ್‌ಪೋರ್ಟ್‌ನೊಂದಿಗೆ ಹೋಟೆಲ್‌ಗೆ ಚೆಕ್‌ ಇನ್ ಆಗುತ್ತಿದ್ದರೆ ಆಕೆಯ ಪತಿ ರಮಾನಿಯಾ ಹಾಗೂ ಡಚ್‌ ಪೌರತ್ವ ಹೊಂದಿದ್ದನು.

ಮೈಕೆಲಿನ್ ತ್ರೀ-ಸ್ಟಾರ್‌ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ಬಳಿಕ ಈ ಜೋಡಿಗೆ ಏಟ್ರಿಯೋ ಹೋಟೆಲ್‌ನ ನೆಲಮಾಳಿಗೆಯಲ್ಲಿದ್ದ ವೈನ್ ಸೆಲ್ಲಾರ್‌ಗೆ ಟೂರ್‌ ಕರೆದೊಯ್ಯಲಾಗಿತ್ತು. ಬಳಿಕ ತಮ್ಮ ಕೋಣೆಗೆ ಹೋದ ದಂಪತಿಗಳು ಅಲ್ಲಿ ಕಳ್ಳತನದ ಸ್ಕೆಚ್‌ ಹಾಕಿದ್ದಾರೆ.

ಬೆಳಗ್ಗಿನ ಜಾವ ಎರಡು ಗಂಟೆ ವೇಳೆ ರಿಸೆಪ್ಷನ್‌ಗೆ ಕರೆ ಮಾಡಿದ ಮಹಿಳೆ, ಆ ವೇಳೆಯಲ್ಲಿ ಕೆಲಸ ಮಾಡುತ್ತಿದ್ದ ಏಕೈಕ ಉದ್ಯೋಗಿಗೆ ಸಲಾಡ್ ಮಾಡಲು ಆರ್ಡರ್‌ ಮಾಡಿದ್ದಾಳೆ. ತಾನು ಏಕಾಂಗಿಯಾಗಿದ್ದ ಕಾರಣ ಈ ವಿನಂತಿಯನ್ನು ಮೊದಲಿಗೆ ತಿರಸ್ಕರಿಸಿದ್ದ. ಆದರೆ ಈ ದಂಪತಿ 14-ಕೋರ್ಸ್‌ನ ಟೇಸ್ಟಿಂಗ್ ಮೆನು ಸವಿದಿದ್ಧ ಕಾರಣ ಹಾಗೂ ಆಕೆ ಪದೇ ಪದೇ ಕೇಳುತ್ತಿದ್ದ ಕಾರಣ ಸಲಾಡ್ ಮಾಡಿಕೊಡಲು ಒಪ್ಪಿದ.

ರಿಸೆಪ್ಷನ್‌ನಲ್ಲಿದ್ದ ಉದ್ಯೋಗಿ ಸಲಾಡ್‌ ಮಾಡುವುದರಲ್ಲಿ ನಿರತನಾಗಿದ್ದ ವೇಳೆ ಈ ಜೋಡಿ ಪತಿ ರಿಸೆಪ್ಷನ್‌ನಲ್ಲಿದ್ದ ಎಲೆಕ್ಟ್ರಾನಿಕ್ ಕೀಲಿಯನ್ನು ಕದ್ದು ವೈನ್ ಸೆಲ್ಲಾರ್‌ಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಆದರೆ ಆ ಕೀಲಿ ತಪ್ಪಾದ ಕೀಲಿಯಾಗಿತ್ತು.

ಇದೀಗ ರಿಸೆಪ್ಷನಿಸ್ಟ್‌ಅನ್ನು ಮತ್ತೊಮ್ಮೆ ದಾರಿ ತಪ್ಪಿಸುವಂತೆ ಪುರುಷ ಮಹಿಳೆಗೆ ತಿಳಿಸಿದ್ದಾನೆ. ಈ ವೇಳೆ ರಿಸೆಪ್ಷನ್‌ನ ಬಾಕ್ಸ್‌ನಲ್ಲಿದ್ದ 27ನೇ ನಂಬರ್‌ನ ಕೀಲಿಯನ್ನು ಕದ್ದ ಪತಿ ವೈನ್ ಸೆಲ್ಲಾರ್‌ ಬಾಗಿಲನ್ನು ತೆರೆದು ಅಲ್ಲಿಂದ 45 ವೈನ್ ಬಾಟಲಿಗಳನ್ನು ಕದ್ದುಕೊಂಡು ಬಂದಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ರಿಸೆಪ್ಷನಿಸ್ಟ್‌ ತನ್ನ ಜಾಗಕ್ಕೆ ಮರಳುವಷ್ಟರಲ್ಲಾಗಲೇ ರಕ್‌ಸ್ಯಾಕ್‌ ಹಾಗೂ ಇನ್ನೆರಡು ದೊಡ್ಡ ಬ್ಯಾಗುಗಳಲ್ಲಿ ಈ ಬಾಟಲಿಗಳನ್ನು ಈತ ತನ್ನ ಕೋಣೆಗೆ ಕದ್ದೊಯ್ದಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read