75 ಸಾವಿರ ದಾಟಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಕುಸಿತ…..!

ಬಂಗಾರ ಬಲು ದುಬಾರಿಯಾಗಿ ಹಲವು ದಿನಗಳೇ ಕಳೆದಿವೆ. ಆದ್ರೀಗ ದಿನೇ ದಿನೇ ಚಿನ್ನದ ಬೆಲೆ ಇಳಿಮುಖವಾಗುತ್ತಿದ್ದು, ಹೆಂಗೆಳೆಯರಲ್ಲಿ ಸಂತಸ ತಂದಿದೆ. ಮಂಗಳವಾರ ಕೂಡ ಎಂಸಿಎಕ್ಸ್ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ದರಗಳು ಕಡಿಮೆಯಾಗಿವೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಕಡಿಮೆಯಾದ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಹಾಗಾಗಿ ಚಿನ್ನ ಖರೀದಿಸುವವರು ಕೊಂಚ ಕಾಯಬಹುದು.

ಮಂಗಳವಾರ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಸುಮಾರು 300 ರೂಪಾಯಿಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಚಿನ್ನ ಸಂಜೆ ವೇಳೆಗೆ 700 ರೂಪಾಯಿಗೂ ಹೆಚ್ಚು ಕುಸಿತ ಕಂಡಿದೆ. 746 ರೂಪಾಯಿ ಕುಸಿತದೊಂದಿಗೆ 70,856 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ಬೆಳ್ಳಿಯ ಬೆಲೆ ಸಹ ಇಳಿಕೆಯಾಗಿದ್ದು, 1357 ರೂಪಾಯಿ ಕುಸಿತದೊಂದಿಗೆ ಕೆಜಿಗೆ 81,126 ರೂಪಾಯಿ ಆಗಿದೆ.

ಬುಲಿಯನ್ ಮಾರುಕಟ್ಟೆಯಲ್ಲೂ ನಿರಂತರ ಕುಸಿತ ಕಾಣುತ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 400 ರೂಪಾಯಿಗಳಷ್ಟು ಕುಸಿದು 71,963 ರೂಪಾಯಿಗೆ ತಲುಪಿದೆ. 23 ಕ್ಯಾರೆಟ್ ಚಿನ್ನದ ದರ 71,675 ರೂ., 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 65,918 ರೂ ಆಗಿದೆ. ಬೆಳ್ಳಿ ದರ ಪ್ರತಿ ಕೆಜಿಗೆ 1000 ರೂ.ಗಿಂತಲೂ ಹೆಚ್ಚು ಇಳಿಕೆಯಾಗಿದೆ. ಬೆಳ್ಳಿ ಪ್ರತಿ ಕೆಜಿಗೆ 80,047 ರೂಪಾಯಿಯಷ್ಟಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read