ವಿಶ್ವದ ಅತಿ ಹೆಚ್ಚು ತಾಪಮಾನ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿದೆ ಒಡಿಶಾದ ಈ ಎರಡು ನಗರಗಳು

ಒಡಿಶಾದ ಬರಿಪಾದ ಮತ್ತು ಜರ್ಸುಗುಡ ವಿಶ್ವದಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿರುವ ಸ್ಥಳಗಳಾಗಿವೆ.
ಜಾಗತಿಕ ಹವಾಮಾನ ಮುನ್ಸೂಚನೆ ತಾಣವಾದ eldoradoweather.com ಪ್ರಕಾರ 44.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೊಂದಿರುವ ಒಡಿಶಾದ ಬರಿಪಾದ ಮತ್ತು ಜರ್ಸುಗುಡ, ದಿನದಲ್ಲಿ ವಿಶ್ವದ ಅತ್ಯಂತ ಹೆಚ್ಚು ತಾಪಮಾನ ಹೊಂದಿರುವ ಸ್ಥಳಗಳಲ್ಲಿ ಕ್ರಮವಾಗಿ ಟಾಪ್ 8 ಮತ್ತು 10 ನೇ ಸ್ಥಾನದಲ್ಲಿವೆ.

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಮಂಗಳವಾರದಂದು 42.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಇದು ಈ ಋತುವಿನಲ್ಲಿ ಗರಿಷ್ಠ ಮಟ್ಟವಾಗಿದೆ.

ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಮಾಹಿತಿಯಲ್ಲಿ ಪೂರ್ವ ಉತ್ತರ ಪ್ರದೇಶದ ಝಾರ್ಸುಗುಡಾ ಮತ್ತು ಹಮೀರ್‌ಪುರವನ್ನು ದಿನದ ದೇಶದ ಅತ್ಯಂತ ಹೆಚ್ಚು ತಾಪಮಾನದ ಸ್ಥಳಗಳೆಂದು ಉಲ್ಲೇಖಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read