ಪ್ರಜ್ಞೆ ತಪ್ಪಿದ ಕೋತಿಗೆ ಟ್ಯಾಕ್ಸಿ ಡ್ರೈವರ್ ಸಿಪಿಆರ್ ಮಾಡಿ ಪ್ರಾಣ ಉಳಿಸಿದ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಜ್ಞಾನವಿಲ್ಲದೇ ಬಿದ್ದಿದ್ದ ಕೋತಿಯನ್ನು ನೋಡಿ ಮರುಗಿದ ಟ್ಯಾಕ್ಸಿ ಡ್ರೈವರ್ ತಕ್ಷಣವೇ ಬಂದು ಅದರ ಜೀವ ಉಳಿಸಲು ಮುಂದಾದರು.
ಸಿಪಿಆರ್ ಮಾಡಿ ಕೋತಿಗೆ ಜೀವ ನೀಡಲು ಸತತವಾಗಿ ಪ್ರಯತ್ನಿಸಿದರು. ಚಾಲಕನ ತ್ವರಿತ ಚಿಂತನೆ ಮತ್ತು ಸಹಾನುಭೂತಿಯು ಫಲಿಸಿದ್ದು ಕೋತಿ ನಿಧಾನವಾಗಿ ಮೇಲೆದ್ದಿತು. ಮರಳಿ ಉಸಿರಾಟ ಮುಂದುವರೆಸಿದ ಕೋತಿಯನ್ನು ಪುಟ್ಟ ಮಗುವಿನಂತೆ ತೋಳಿನಲ್ಲಿ ಎತ್ತುಕೊಂಡು ಚಾಲಕ ಮುಂದೆ ತೆರಳುತ್ತಾರೆ.
ಘಟನೆಯ ನಿಖರವಾದ ಸ್ಥಳದ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ, ಅದಾಗ್ಯೂ ಇದು ತಮಿಳುನಾಡಿನಲ್ಲಿ ಸಂಭವಿಸಿದ ಘಟನೆ ಎಂಬ ಊಹಾಪೋಹಗಳಿವೆ. ಘಟನೆಯು 2021 ರಲ್ಲಿ ಸಂಭವಿಸಿದ್ದರೂ, ವೀಡಿಯೊ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂಟರ್ನೆಟ್ ಬಳಕೆದಾರರು ಚಾಲಕನ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸಿದ್ದಾರೆ.
https://twitter.com/AMAZlNGNATURE/status/1788241325126488153?ref_src=twsrc%5Etfw%7Ctwcamp%5Etweetembed%7Ctwterm%5E1788241325126488153%7Ctwgr%5E5c08ba4f2203752deacd39d1121fb9997fd4f763%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fheartwarmingrescuetaxidriverbreatheslifeintounconsciousmonkeywithcproldvideogoesviralagain-newsid-n607170684
https://twitter.com/Rainmaker1973/status/1788490222700761388?ref_src=twsrc%5Etfw%7Ctwcamp%5Etweetembed%7Ctwterm%5E1788490222700761388%7Ctwgr%5E5c08ba4f2203752deacd39d1121fb9997fd4f763%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fheartwarmingrescuetaxidriverbreatheslifeintounconsciousmonkeywithcproldvideogoesviralagain-newsid-n607170684
https://twitter.com/ashwinravi99/status/1470226103365107714?ref_src=twsrc%5Etfw%7Ctwcamp%5Etweetembed%7Ctwterm%5E1470226103365107714%7Ctwgr%5E5c08ba4f2203752deacd39d1121fb9997fd4f763%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fheartwarmingrescuetaxidriverbreatheslifeintounconsciousmonkeywithcproldvideogoesviralagain-newsid-n607170684