Heartbreaking: ಐಫೋನ್ ಗಾಗಿ 3 ದಿನ ಊಟ ಬಿಟ್ಟ ದೇಗುಲದಲ್ಲಿ ಹೂ ಮಾರುವ ಮಹಿಳೆ ಮಗ; ಪುತ್ರ ವಾತ್ಸಲ್ಯದಿಂದ ಸಾಲಸೋಲ ಮಾಡಿ ಮೊಬೈಲ್ ಕೊಡಿಸಿದ ತಾಯಿ…!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಎಲ್ಲರ ಮನಕಲಕಿದೆ. ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದ ದೇಗುಲದಲ್ಲಿ ಹೂ ಮಾರುವ ಮಹಿಳೆಯೊಬ್ಬರು ತಮ್ಮ ಮಗ ಐಫೋನ್ ಬೇಕೇ ಬೇಕೆಂದು ಹಠ ಹಿಡಿದು ಮೂರು ದಿನಗಳ ಕಾಲ ಊಟ ಮಾಡದೆ ಉಪವಾಸ ಮುಷ್ಕರ ಮಾಡಿದ ಕಾರಣ ಮಗನ ಮನಸ್ಸು ನೋಯಿಸಬಾರದು ಎಂದು ಆ ಮಹಿಳೆ ಸಾಲ ಮಾಡಿ ದುಬಾರಿ ಬೆಲೆಯ ಐಫೋನ್ ಅನ್ನು ಮಗನಿಗೆ ಕೊಡಿಸಿದ್ದಾರೆ.

ಈ ವಿಡಿಯೋವನ್ನು ಪತ್ರಕರ್ತ ಅಭಿಷೇಕ್ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಮಹಿಳೆಯ ಪರಿಸ್ಥಿತಿಗೆ ಮಮ್ಮಲಮರುಗಿದ್ದಾರೆ. ಅಲ್ಲದೇ ತನ್ನ ಬಡ ತಾಯಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ದುಬಾರಿ ಬೆಲೆಯ ಐಫೋನ್ ಗಾಗಿ ಹಠ ಹಿಡಿದ ಮಹಿಳೆಯ ಮಗನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಭಿಷೇಕ್ ಅವರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ಈ ವಿಡಿಯೋ ಪೋಸ್ಟ್ ಗೆ ತರಹೇವಾರಿ ಕಾಮೆಂಟ್ ಗಳು ಹರಿದು ಬರುತ್ತಿದ್ದು ವಿಡಿಯೋ ವೈರಲ್ ಆಗಿದೆ.

ಈ ಮಹಿಳೆ ದೇವಾಲಯವೊಂದರ ಪ್ರಾಂಗಣದಲ್ಲಿ ಹೂ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದು, ಅಭಿಷೇಕ್ ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಆಕೆ, ತನ್ನ ಪರಿಸ್ಥಿತಿಯನ್ನು ಹೇಳಿಕೊಂಡಿದ್ದು, ಆದರೆ ಮಗ ಮೂರು ದಿನಗಳ ಕಾಲ ಊಟ ಮಾಡದೆ ಇದ್ದ ಕಾರಣ ಅವನ ಹಠಕ್ಕೆ ಮಣಿದು ಫೋನ್ ಕೊಡಿಸಿದ್ದೇನೆ. ಮುಂದೆ ಅವನು ಇದಕ್ಕಿಂತ ಹೆಚ್ಚು ದುಡಿಯಲಿ ಎಂದು ಹಾರೈಸಿದ್ದಾರೆ. ವಿಡಿಯೋ ವೀಕ್ಷಿಸಿದ ಕೆಲವರು ಮಹಿಳೆಯ ಮಗ ತನಗೆ ಫೋನ್ ಬೇಕೆಂದಿದ್ದರೆ ಕಡಿಮೆ ಬೆಲೆಯ ಬೇರೆ ಯಾವುದಾದರೂ ಒಂದನ್ನು ಖರೀದಿಸಬಹುದಾಗಿತ್ತು. ಆದರೆ ತನ್ನ ತಾಯಿಯ ಕಷ್ಟ ಅರ್ಥ ಮಾಡಿಕೊಳ್ಳದೆ ದುಬಾರಿ ಬೆಲೆಯ ಐಫೋನ್ ಖರೀದಿಸಿದ್ದು ಸರಿಯಲ್ಲ ಎಂದಿದ್ದಾರೆ. ನೀವು ಕೆಳಗೆ ಕಾಮೆಂಟ್ ನಲ್ಲಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ.

https://twitter.com/AbhishekSay/status/1825021289377186185?ref_src=twsrc%5Etfw%7Ctwcamp%5Etweetembed%7Ctwterm%5E1825021289377186185%7Ctwgr%5Ead647d20af1d78d97c31ed72f695affec

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read