ಹೃದಯ ರೋಗಿಗಳು ಹೆಚ್ಚು ನೀರು ಕುಡಿಯುವಂತಿಲ್ಲ, ಇಲ್ಲಿದೆ ತಜ್ಞರೇ ನೀಡಿರುವ ಸಲಹೆ

ಉತ್ತಮ ಆರೋಗ್ಯಕ್ಕೆ ನೀರು ಕುಡಿಯುವುದು ಬಹಳ ಮುಖ್ಯ. ದಿನವಿಡೀ ಕನಿಷ್ಠ 7-8 ಗ್ಲಾಸ್ ನೀರು ಕುಡಿಯಬೇಕು ಎಂದು ತಜ್ಞರೇ ಹೇಳುತ್ತಾರೆ. ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಕುಡಿಯಬೇಕು ಎಂಬ ಮಾತಿದೆ. ಆದರೆ ಹೃದ್ರೋಗಿಗಳ ವಿಷಯದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಹೃದಯದ ಸಮಸ್ಯೆ ಇರುವವರು ಕಡಿಮೆ ನೀರು ಕುಡಿಯಲು ಸೂಚಿಸಲಾಗುತ್ತದೆ. ಹೃದ್ರೋಗಿಗಳು ಏಕೆ ಕಡಿಮೆ ನೀರು ಕುಡಿಯಬೇಕು? ಅವರಿಗೆ ದಿನಕ್ಕೆ ಎಷ್ಟು ನೀರು ಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ಹೃದ್ರೋಗಿಗಳು ಏಕೆ ಕಡಿಮೆ ನೀರು ಕುಡಿಯಬೇಕು?

ತಜ್ಞರ ಪ್ರಕಾರ ಹೃದಯ ರೋಗಿಗಳು ಹೆಚ್ಚು ನೀರು ಕುಡಿಯಬಾರದು.  ಇದು ಅವರ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ನೀರು ಮಾತ್ರವಲ್ಲ ಯಾವುದೇ ಪಾನೀಯವನ್ನು ಕಡಿಮೆ ಪ್ರಮಾಣದಲ್ಲಿ ಕುಡಿಯಬೇಕು. ಏಕೆಂದರೆ ಹೃದ್ರೋಗಿಗಳು ಹೆಚ್ಚು ನೀರು ಕುಡಿದರೆ ನೀರು ದೇಹದಲ್ಲಿ ಸಂಗ್ರಹವಾಗಿಬಿಡುತ್ತದೆ. ಕಾಲುಗಳು, ತೊಡೆ ಮತ್ತು ಸೊಂಟದಲ್ಲಿ ಊತವನ್ನು ಉಂಟುಮಾಡುತ್ತದೆ. ಇದರಿಂದಾಗಿ ಹೃದಯದ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತದೆ. ಅಷ್ಟೇ ಅಲ್ಲ  ಶ್ವಾಸಕೋಶದಲ್ಲಿ ನೀರು ಶೇಖರಣೆಯಾಗುವ ಸಾಧ್ಯತೆಯೂ ಹೆಚ್ಚುತ್ತದೆ. ಇದರಿಂದ ರೋಗಿಯು ಉಸಿರಾಡಲು ಕಷ್ಟವಾಗಬಹುದು.

ಹೃದ್ರೋಗಿಗಳು ಎಷ್ಟು ನೀರು ಕುಡಿಯಬೇಕು?

ಆರೋಗ್ಯವಂತ ವ್ಯಕ್ತಿಯು ಕನಿಷ್ಠ 7-8 ಗ್ಲಾಸ್ ಕುಡಿಯಬೇಕು. ಆದರೆ ಹೃದ್ರೋಗಿಗಳು ಚಳಿಗಾಲದಲ್ಲಿ ದಿನಕ್ಕೆ ಒಂದೂವರೆ ಲೀಟರ್ ನೀರು ಕುಡಿದರೆ ಸಾಕು. ಬೇಸಿಗೆ ಕಾಲದಲ್ಲಿ ಕನಿಷ್ಠ ಎರಡು ಲೀಟರ್ ನೀರು ಕುಡಿಯಬೇಕು. ಹೃದ್ರೋಗಿಗಳು ನೀರನ್ನು ಒಂದೇ ಬಾರಿಗೆ ಕುಡಿಯಬಾರದು. ಸ್ವಲ್ಪ ಸ್ವಲ್ಪ ಕುಡಿಯಬೇಕು. ಅಂದರೆ ಸೀಮಿತ ಅಂತರದಲ್ಲಿ ಇದನ್ನು ಕುಡಿಯಬೇಕು. ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವುದರಿಂದ ಹೃದಯದ ಮೇಲೆ ಒತ್ತಡ ಬಿದ್ದು, ಉಸಿರಾಟದ ತೊಂದರೆಯಾಗುತ್ತದೆ.

6 ತಿಂಗಳ ಕಾಲ ದೇಹದಲ್ಲಿ ನಿರಂತರ ನೀರಿನ ಕೊರತೆಯಿದ್ದರೆ ಅದು ದೀರ್ಘಕಾಲದ ಹೈಪೊಟೆನ್ಷನ್ ಸಮಸ್ಯೆಯನ್ನು ಉಂಟುಮಾಡಬಹುದು. ದೇಹದಲ್ಲಿ 2 ರಿಂದ 5 ಪ್ರತಿಶತದಷ್ಟು ನೀರಿನ ಕೊರತೆಯಿದ್ದರೆ ಅದನ್ನು ಸೌಮ್ಯ ನಿರ್ಜಲೀಕರಣ ಎಂದು ಕರೆಯಲಾಗುತ್ತದೆ. 5 ಕ್ಕಿಂತ ಹೆಚ್ಚು ನೀರಿನ ನಷ್ಟವಾದರೆ ಅದನ್ನು ದೀರ್ಘಕಾಲದ ನಿರ್ಜಲೀಕರಣ ಎಂದು ಕರೆಯಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read