ನಿವೃತ್ತ ಶಿಕ್ಷಕರೊಬ್ಬರು ವೇದಿಕೆ ಮೇಲೆ ಹಾಡು ಹಾಡುತ್ತಲೇ ಕುಸಿದು ಬಿದ್ದು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಮಹಾರಾಷ್ಟ್ರದ ಪನ್ಹಾಲಾದಲ್ಲಿ ನಡೆದಿದೆ.
ವಿನಾಯಕ್ ಸಕಾರಾಮ್ ಕುಂಬಾರ್ (78) ಮೃತ ನಿವೃತ್ತ ಶಿಕ್ಷಕ. 2001-02ನೇ ಬ್ಯಾಚ್ ನ ಹಳೆಯ ವಿದ್ಯಾರ್ಥಿಗಳು ಪುನರ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಿವೃತ್ತ ಶಿಕ್ಷಕ ವಿನಾಯಕ್ ಸಕಾರಾಮ್ ಅವರನ್ನು ವಿದ್ಯಾರ್ಥಿಗಳು ಆಹ್ವಾನಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರ ಅಭಿಪ್ರಾಯ- ಅನುಭವ ಹಂಚಿಕೆ ಆಯೋಜಿಸಲಾಗಿತ್ತು.
ಅಲ್ಲದೇ ಮನರಂಜನಾ ಭಾಗವಾಗಿ ಶಿಕ್ಷಕರಿಂದ ಹಾಡು ಕಾರ್ಯಕ್ರಮಗಳು ಇದ್ದವು. ವೇದಿಕೆ ಮೇಲೆ ವಿನಾಯಕ್ ಸಕಾರಾಮ್ ಹಾಡು ಹಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಾಂಗ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.