ಜೈಪುರ : ಯುವಕರಾಯ್ತು ಈಗ ಮಕ್ಕಳ ಸರದಿ. ಹೃದಯಾಘಾತದಿಂದ 4 ನೇ ತರಗತಿ ಬಾಲಕಿ ಮೃತಪಟ್ಟ ಘಟನೆ ಜೈಪುರದಲ್ಲಿ ನಡೆದಿದೆ.
ಪ್ರಾಚಿ ಕುಮಾವತ್ ಕೇವಲ ಒಂಬತ್ತು ವರ್ಷದವಳಾಗಿದ್ದಳು, ಸಿಕಾರ್ನ ದಂತಾ ಪಟ್ಟಣದಲ್ಲಿ 4 ನೇ ತರಗತಿಯಲ್ಲಿ ಓದುತ್ತಿದ್ದಳು. ಆರೋಗ್ಯವಾಗಿದ್ದಂತೆ ತೋರುತ್ತಿದ್ದ ಹುಡುಗಿ ಮಂಗಳವಾರ ಬೆಳಿಗ್ಗೆ ವಿರಾಮದ ಸಮಯದಲ್ಲಿ ಊಟಕ್ಕೆ ಕುಳಿತಳು, ಆದರೆ ಟಿಫಿನ್ ಬಾಕ್ಸ್ ತೆರೆಯುವಷ್ಟರಲ್ಲಿ ಆಕೆ ಪ್ರಜ್ಞೆ ತಪ್ಪಿದಳು. ಶಿಕ್ಷಕರು ಅವಳ ಸಹಾಯಕ್ಕೆ ಧಾವಿಸಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿನ ವೈದ್ಯರು ಅವಳನ್ನು ಬದುಕಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು . ಆದರೆ ಪ್ರಯೋಜನವಾಗಿಲ್ಲ. ಅವಳ ರಕ್ತದೊತ್ತಡ ಕಡಿಮೆಯಾಗಿತ್ತು ಮತ್ತು ಅವಳು ಉಸಿರಾಡಲು ಕಷ್ಟಪಡುತ್ತಿದ್ದಳು .ಅವರ ಕುಟುಂಬದವರು ಅವಳನ್ನು ಸಿಕಾರ್ನ ದೊಡ್ಡ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಷ್ಟರಲ್ಲೇ ಅವಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಪ್ರಾಚಿಗೆ ಸ್ವಲ್ಪ ಶೀತ ಇದ್ದ ಕಾರಣ ಕಳೆದ ಎರಡು-ಮೂರು ದಿನಗಳಿಂದ ಶಾಲೆಗೆ ಬಂದಿರಲಿಲ್ಲ ಎಂದು ಆದರ್ಶ ವಿದ್ಯಾ ಮಂದಿರ ಶಾಲೆಯ ಪ್ರಾಂಶುಪಾಲ ನಂದ ಕಿಶೋರ್ ತಿವಾರಿ ತಿಳಿಸಿದರು. ಸೋಮವಾರ ಶಾಲೆಗೆ ಬಂದಾಗ, ಅವಳು ಆರೋಗ್ಯವಾಗಿದ್ದಳು ಮತ್ತು ಬೆಳಗಿನ ಪ್ರಾರ್ಥನೆಯಲ್ಲೂ ಆಕೆ ಭಾಗವಹಿಸಿದಳು, ನಂತರ ಊಟದ ಸಮಯದಲ್ಲಿ ಅವಳು ಪ್ರಜ್ಞೆ ತಪ್ಪಿದಳು ಎಂದು ಹೇಳಿದ್ದಾರೆ.
💔 9-Year-Old Girl Dies of Sudden Heart Attack at School in Rajasthan
— India Unfiltered (@THENEWINDIA23) July 16, 2025
🔹 Class 4 student Prachi Kumawat collapsed while opening her lunchbox in Sikar
🔹 Rushed to CHC, briefly revived, but suffered a second cardiac arrest in ambulance
🔹 Doctors say it was a sudden heart attack,… pic.twitter.com/OGjzPM9SSx