ಬಾಗಲಕೋಟೆ: ನಿದ್ದೆಯಲ್ಲಿದ್ದಾಗಲೇ ರೈತರೊಬ್ಬರು ಹೃದಯಗಹಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುರಡಿ ಗ್ರಾಮದಲ್ಲಿ ನಡೆದಿದೆ.
ಅಂದಾನಪ್ಪ ಸೂಡಿ (43) ಮೃತ ರೈತ. ರಾತ್ರಿ ಎದೆ ನೋವು ಎಂದು ಹೇಳಿದ್ದರು. ಬಳಿಕ ಮಲಿಗಿದ್ದ ರೈತ ನಿದ್ದೆಗೆ ಜಾರಿದ್ದಾರೆ. ಇಂದು ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ ಕಾರಣ ಮನೆಯವರು ಅಂದಾನಪ್ಪನನ್ನು ಎಬ್ಬಿಸಲು ಯತ್ನಿಸಿದ್ದಾರೆ.
ಎಷ್ಟೇ ಕರೆದರೂ ಅಂದಾನಪ್ಪ ಮೇಲೆಳಲಿಲ್ಲ. ಈ ವೇಳೆ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.