ಹಬ್ಬದ ಹೊತ್ತಲ್ಲೇ ಶಾಕಿಂಗ್ ನ್ಯೂಸ್: ರಾಜ್ಯಾದ್ಯಂತ ಡೆಂಘೀ ಜ್ವರ ಭಾರಿ ಉಲ್ಬಣ

ಬೆಂಗಳೂರು: ರಾಜ್ಯಾದ್ಯಂತ ಡೆಂಘೀ ಜ್ವರ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ. ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ 1,404 ಮಂದಿಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಡೆಂಘೀ ಜ್ವರ ಪ್ರಕರಣಗಳು ರಾಜ್ಯದ ಇತರೆ ಪ್ರದೇಶಗಳಲ್ಲಿಯೂ ತೀವ್ರ ಏರಿಕೆ ಕಂಡಿವೆ. ನಿರ್ಲಕ್ಷ ವಹಿಸಿದಲ್ಲಿ ಮಾರಣಾಂತಿಕವಾಗುವ ಡೆಂಘೀ ಜ್ವರದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ಅಕ್ಟೋಬರ್ ಒಂದರ ವೇಳೆಗೆ ಬೆಂಗಳೂರು ನಗರದಲ್ಲಿ 5267 ಡೆಂಘೀ ಪ್ರಕರಣಗಳು ಕಂಡು ಬಂದಿದ್ದು, ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ 4505 ಪ್ರಕರಣ ವರದಿಯಾಗಿವೆ. ಅ.20 ರ ವೇಳೆಗೆ ಡೆಂಘೀ ಪ್ರಕರಣ ಸಂಖ್ಯೆ ಏರಿಕೆ ಕಂಡಿದೆ. ರಾಜ್ಯದ ಇತರಡೆ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಕಾಣುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ರೋಗ ಲಕ್ಷಣ

ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಯಿಂದ ಡೆಂಘೀ ಜ್ವರ ಹರಡುತ್ತದೆ. ಸೊಳ್ಳೆ ಕಚ್ಚಿದ ನಾಲ್ಕರಿಂದ ಐದು ದಿನಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡು ಮೈ ಕೈ ನೋವು, ವಿಪರೀತ ಜ್ವರ, ಕೀಲು ನೋವು, ರಕ್ತದಲ್ಲಿ ಪ್ಲೇಟ್ ಲೆಟ್ ಕಣಗಳ ಸಂಖ್ಯೆ ಕುಸಿತವಾಗುತ್ತದೆ. ಪ್ಲೇಟ್ ಸಂಖ್ಯೆ ಭಾರಿ ಕುಸಿತವಾದಲ್ಲಿ ರೋಗಿ ಸಾವಿಗೆ ಕಾರಣವಾಗುವ ಸಂಭವ ಇರುತ್ತದೆ.

ಮುನ್ನೆಚ್ಚರಿಕೆ ವಹಿಸಿ

ಹಗಲು ವೇಳೆ ಕಚ್ಚುವ ಸೊಳ್ಳೆಗಳಿಂದ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿನ ನೀರು ಸಂಗ್ರಹ ತೊಟ್ಟಿ, ಡ್ರಮ್ ಗಳನ್ನು ಸ್ವಚ್ಛಗೊಳಿಸಬೇಕು. ಸೊಳ್ಳೆಗಳ ತಾಣವಾದ ಟೈರ್, ತೆಂಗಿನ ಚಿಪ್ಪುಗಳಲ್ಲಿ ನೀರು ತೆಗೆಯಿರಿ, ಫ್ರಿಜ್, ಎಸಿಗಳಲ್ಲಿ ನೀರನ್ನು ಸ್ವಚ್ಛಗೊಳಿಸಬೇಕು. ನೀರು ನಿಲುಗಡೆ ಜಾಗದಲ್ಲಿ ಲಾರ್ವಾ ನಾಶ ಮಾಡಬೇಕು. ಜ್ವರದ ಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read