ನಿಮ್ಮ ತಲೆನೋವಿಗೆ ಕಾರಣವಾಗಿರಬಹುದು ಹಲ್ಲು…! ಪರೀಕ್ಷೆ ಮಾಡಿಕೊಳ್ಳಿ

ಕಣ್ಣಿನ ಸಮಸ್ಯೆಯಿಂದ ತಲೆನೋವು ಬರೋದು ನಿಮಗೆಲ್ಲ ಗೊತ್ತು. ದೀರ್ಘಕಾಲ ನೀವು ಗ್ಯಾಜೆಟ್‌ ವೀಕ್ಷಣೆ ಮಾಡ್ತಿದ್ದರೆ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಅನೇಕರು ತಲೆನೋವು ಅನುಭವಿಸುತ್ತಾರೆ. ಆದ್ರೆ ನಿಮ್ಮ ಹಲ್ಲು ಕೂಡ ತಲೆನೋವಿಗೆ ಕಾರಣವಾಗುತ್ತದೆ. ಹಲ್ಲಿನ ಆರೋಗ್ಯ ಬಹಳ ಮುಖ್ಯ.

ಹಲ್ಲಿನ ಸಮಸ್ಯೆ ಇರುವವರು ದವಡೆ ನೋವಿಗೆ ಒಳಗಾಗ್ತಾರೆ. ದವಡೆ  ಮತ್ತು ತಲೆಬುರುಡೆಗೆ ಸಂಪರ್ಕಿಸುವ ಟೆಂಪೊರೊಮ್ಯಾಂಡಿಬ್ಯುಲರ್ ಜಾಯಿಂಟ್‌ ಈ ನೋವು ಉಂಟಾಗಬಹುದು. ಬಾಯಿ ತೆರೆಯುವಾಗ ಅಥವಾ ಮುಚ್ಚುವಾಗ, ಜಗಿಯುವಾಗ ಅಥವಾ ಮಾತನಾಡುವಾಗ ತಲೆನೋವು ಬಂದರೆ  ಅದಕ್ಕೆ ಕಾರಣ ಹಲ್ಲು ನೋವು ಎಂದರ್ಥ.

ಇದಲ್ಲದೆ ನಿಮ್ಮ ಹಲ್ಲು ಮುರಿದಿದ್ದರೆ, ಸೋಂಕಿಗೆ ಒಳಗಾಗಿದ್ದರೆ ತಲೆನೋವು ಬರುತ್ತದೆ. ನೀವು ಬಿಸಿ ಆಹಾರ ಅಥವಾ ತಣ್ಣನೆಯ ಆಹಾರ ಸೇವನೆ ಮಾಡಿದಾಗ ನಿಮಗೆ ತಲೆ ನೋವು ಕಾಣಿಸಿಕೊಂಡರೆ ನೀವು ಹಲ್ಲಿನ ಸಮಸ್ಯೆಗೆ ಒಳಗಾಗಿದ್ದೀರಿ ಎಂದು ಅರ್ಥೈಸಿಕೊಳ್ಳಿ.

ಬರೀ ತಲೆ ನೋವು ಮಾತ್ರವಲ್ಲ ಕಣ್ಣಿನ ಸುತ್ತಮುತ್ತ, ಮುಖದ ಭಾಗದಲ್ಲಿ ನೋವಿದ್ದರೆ ಅದೂ ಹಲ್ಲಿನಿಂದಲೇ ಉಂಟಾಗಿರುತ್ತದೆ. ಹಲ್ಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ. ವೈದ್ಯರಿಂದ ಚಿಕಿತ್ಸೆ ಪಡೆಯುವುದು ಒಳ್ಳೆಯದು.

ಹಲ್ಲಿನ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ದಿನಕ್ಕೆ ಎರಡು ಬಾರಿ ಬ್ರಷ್‌ ಮಾಡಬೇಕು. ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗಿ. ಒತ್ತಡದಿಂದ ದೂರವಿರುವುದು ಮುಖ್ಯ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ, ಧ್ಯಾನ ಮಾಡಿ. ಒತ್ತಡ ಕಡಿಮೆ ಆದಲ್ಲಿ ಹಲ್ಲು ಕಡಿಯುವುದು, ತಲೆ ನೋವು ಕಡಿಮೆ ಆಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read