BIG NEWS : ಪೊಲೀಸ್ ಇಲಾಖೆಯಲ್ಲೊಬ್ಬ ಭೂಗಳ್ಳ : ‘ನಕಲಿ ದಾಖಲೆ’ ಸೃಷ್ಟಿಸಿ 25 ಕೋಟಿ ಮೌಲ್ಯದ ಜಮೀನು ಲಪಟಾಯಿಸಿದ ಹೆಡ್ ಕಾನ್ಸ್ ಟೇಬಲ್.!

ನೆಲಮಂಗಲ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಮಾಲೀಕನಿಗೇ ಗೊತ್ತಾಗದಂತೆ ೨೫ ಕೋಟಿ ಮೌಲ್ಯದ ಜಮೀನನ್ನು ಹೆಡ್ ಕಾನ್ಸ್ ಟೇಬಲ್ ಲಪಟಾಯಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ.

ಹೆಡ್ ಕಾನ್ಸ್ ಟೇಬಲ್ ಗಿರಿಜೇಶ್ ತನ್ನ ಸಹಚರರೊಂದಿಗೆ ಈ ಕೃತ್ಯವೆಸಗಿದ್ದು ತನಿಖೆಯಲ್ಲಿ ಬಯಲಾಗಿದೆ. ಹೆಡ್ ಕಾನ್ಸ್ ಟೇಬಲ್ ಈ ಹೆಂದೆಯೇ ಪ್ರಕರಣದವೊಂದರ ಆರೋಪದಲ್ಲಿ ಸಸ್ಪೆಂಡ್ ಆಗಿದ್ದ. ಆದಾಗ್ಯೂ ತನ್ನ ಹಳೇ ಚಾಳಿ ಮುಂದುವರೆಸಿದ್ದ.

ಭೂ ಮಾಲೀಕರಿಗೆ ಗೊತ್ತಾಗದಂತೆ ಜಮೀನನ್ನು ತನ್ನ ಹಾಗೂ ಸಹಚರರ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾನೆ. ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಮಾಚನಹಳ್ಳಿ ಗ್ರಾಮದ ಥ್ಯಾಂಪಿ ಮ್ಯಾಥ್ಯೂ ಎಂಬುವವರಿಗೆ ಸೇರಿದ 8 ಎಕರೆ ಜಮೀನನ್ನು ಅವರಿಗೆ ತಿಳಿಯದೇ ಮೂರ್ನಾಲ್ಕು ಜನರ ಮೂಲಕ ರಿಜಿಸ್ಟರ್ ಮಾಡಲಾಗಿದೆ. ವಿಷಯ ತಿಳಿದ ಥ್ಯಾಂಪಿ ಮ್ಯಾಥ್ಯೂ ಪೊಲೀಸರಿಗೆ ದೂರು ನೀಡಿದ್ದು, ಗಿರಿಜೇಶ್ ಹಾಗೂ ಆತನ ಸಹಚರರಾದ ಮನೋಜ್, ರೋಹಿಣಿ ಸೇರಿದಂತೆ ಹಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read