ದಾವಣಗೆರೆ: ಹೆಡ್ ಕಾನ್ಸ್ ಟೇಬಲ್ ಓರ್ವರ ಮನೆ ಬೀಗ ಮುರಿದು ಚಿನ್ನಾಭರಣ, ಹಣ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ದಾವಾಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಿದ್ಯಾನಗರದಲ್ಲಿ ನಡೆದಿದೆ.
ಹೆಡ್ ಕಾನ್ಸ್ ಟೇಬಲ್ ಜಯನಾಯ್ಕ್ ಮನೆಯಲ್ಲಿ ಕಳ್ಳತನವಾಗಿದೆ ಕಳ್ಳರು 4.80ಲಕ್ಷ ರೂ ಚಿನ್ನಾಭರಣ, 5 ಸಾವಿರ ರೂ ನಗದು ಹಣ ಕದ್ದೊಯ್ದಿದ್ದಾರೆ. ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದರು. ಈ ವೇಳೆ ದರೋಡೆಕೋರರು ಮನೆ ಕಳ್ಳತನ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಕುಟುಂಬದವರು ಮನೆಗೆ ವಾಪಾಸ್ ಆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಹರಿಹರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.